ಮೆಟ್ರೋಗೆ ಅನುದಾನ ಸಮರ: ಸಂಸದ ತೇಜಸ್ವಿ ಸೂರ್ಯ ಆರೋಪಕ್ಕೆ ಸಚಿವ ಕೃಷ್ಣ ಭೈರೇಗೌಡ ಕೌಂಟರ್
ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ನಡುವೆಯೇ ಅನುದಾನ ಹಂಚಿಕೆ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಗಳಿಗೆ ಸಚಿವ ಕೃಷ್ಣ ಭೈರೇಗೌಡ ತಿರುಗೇಟು ನೀಡಿದ್ದಾರೆ. ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 84ರಷ್ಟು ವೆಚ್ಚ ಭರಿಸುತ್ತಿದ್ದು, ರಾಜ್ಯ ಸರ್ಕಾರ ಇತ್ತೀಚಿಗೆ ಕೂಡ ಸಾವಿರದ ನಲವತ್ತಾರು ಕೋಟಿ ಕೊಟ್ಟಿದೆ. ಮೆಟ್ರೋಗೆ ಸ್ವಂತ ಆದಾಯದಿಂದ ಸಾಲ ತೀರಿಸುವ ಶಕ್ತಿ ಇಲ್ಲ ಎಂದವರು ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 13: ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಸಂಭ್ರಮದ ನಡುವೆ ಮೆಟ್ರೋಗೆ ಅನುದಾನ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಮಾತಿನ ಸಮರ ಜೋರಾಗಿದೆ. ಕೇಂದ್ರದ ಪಾಲೇ ಜಾಸ್ತಿ ಎಂಬ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಕೃಷ್ಣ ಭೈರೇಗೌಡ, ಮೆಟ್ರೋಗಾಗಿ ರಾಜ್ಯ ಸರ್ಕಾರ ಶೇ. 84ರಷ್ಟು ವೆಚ್ಚ ಭರಿಸುವುದು ಸತ್ಯ. ರಾಜ್ಯ ಸರ್ಕಾರ ಇತ್ತೀಚಿಗೆ ಕೂಡ ಸಾವಿರದ ನಲವತ್ತಾರು ಕೋಟಿ ಕೊಟ್ಟಿದೆ. ನಾವೂ ಸಾಲ ಪಡೆಯುತ್ತೇವೆ ಅದನ್ನು ತೀರಿಸುವುದು ಕೂಡ ನಾವೇ. ಮೆಟ್ರೋಗೆ ಸ್ವಂತ ಆದಾಯದಿಂದ ಸಾಲ ತೀರಿಸುವ ಶಕ್ತಿ ಇಲ್ಲ. ಕೇಂದ್ರದಿಂದ ಕಾರ್ಯವೈಖರಿಯಿಂದ ಡಾಲರ್ ಅಪಮೌಲ್ಯ ಆದಾಗ ನಾವೂ ತೀರಿಸುವ ಮೊತ್ತ ತುಂಬಾ ಜಾಸ್ತಿ. ಸರ್ಜಾಪುರ ಭಾಗಕ್ಕೆ ಮೆಟ್ರೋ ಮಾಡಲು ಎರೆಡು ವರ್ಷವಾದ್ರೂ ಕೇಂದ್ರ ಸರ್ಕಾರ ಅಪ್ರೂವಲ್ ಮಾಡ್ತಿಲ್ಲ. ನಾವು ವೆಚ್ಚ ಜಾಸ್ತಿ ಮಾಡಿದ್ದೇವೆ ಅನ್ನೋದಾದ್ರೆ ಅದನ್ನು ಕಟ್ ಮಾಡಿ ಕೊಡಲಿ. ಜನರಿಗೆ ಸೌಕರ್ಯ ಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೈ ಜೋಡಿಸಬೇಕು.ಅತಿ ಹೆಚ್ಚು ತೆರಿಗೆ ನಾವು ಕಟ್ಟುತ್ತೇವೆ, ಆದ್ರೆ ಪಾಲು ಬರುವಾಗ ನಮಗೆ ತುಂಬಾ ಕಡಿಮೆ ಕೊಡ್ತಾರೆ. ನಮ್ಮ ತೆರಿಗೆಯಲ್ಲಿ 20 ಪರ್ಸೆಂಟ್ ಕೂಡ ವಾಪಸ್ ಕೊಡ್ತಿಲ್ಲ ಎಂದವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
