ಮಗನಿಗೆ ಟಿಕೆಟ್ ಸಿಗುವ ಸಂತಸದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿಗೆ ಪೂರಕ ವಾತಾವರಣವಿದೆ ಎಂದರು!

|

Updated on: Mar 21, 2024 | 6:06 PM

ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಮಗನಿಗೆ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರೆ, ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾಗಾಗಿ ಚಿಕ್ಕೋಡಿ ಕ್ಷೇತ್ರದ ಲಾಬಿ ಮಾಡಿ ಯಶಕಂಡಿದ್ದಾರೆ. ನಿನ್ನೆ ಬಾಗಲಕೋಟೆಯ ವೀಣಾ ಕಾಶಪ್ಪನವರ್ ಟಿಕೆಟ್ ತಪ್ಪಿದ್ದಕ್ಕೆ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. ಕ್ಷೇತ್ರದ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಪಾಲಾದಂತಿದೆ.

ಬೆಂಗಳೂರು: ಇವತ್ತು ನಗರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಸುದ್ದಿಗಾರರು ಏನ್ ಮೇಡಂ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಸ್ಪರ್ಧಿಸಲು ಟಿಕೆಟ್ ಸಿಕ್ಕೇ ಬಿಟ್ಟಿತು ಅಂದಾಗ ಮುಖದಲ್ಲಿ ಮಂದಹಾಸ! ಖುಷಿಯಿಂದ ಬೀಗುತ್ತಲೇ ಅವರು ಇನ್ನೂ ಅಧಿಕೃತ ಘೋಷಣೆ ಆಗಿಲ್ಲ, ತಾವೆಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಮೀಟಿಂಗ್ ಗೆ ಬನ್ನಿ ಅಂತ ಕರೆಬಂದ ಕಾರಣ, ಹಿರಿಯರ ಆಶೀರ್ವಾದ ಪಡೆಯೋಣ ಅಂತ ಮಗನನ್ನು ಕರೆದುಕೊಂಡು ನಗರಕ್ಕೆ ಬಂದಿರುವುದಾಗಿ ಹೇಳಿದರು. ಬೆಳಗಾವಿ ಮತ್ತು ಚಿಕ್ಕೋಡಿ (Chikkodi) ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದೆ, ತಮ್ಮ ಸರ್ಕಾರದ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಮತ್ತು ತಾನು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳಿಂದ ಜನ ಬಹಳ ಸಂತೋಷದಲ್ಲಿದ್ದಾರೆ ಎಂದು ಲಕ್ಷ್ಮಿ ಹೇಳಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಮಗನಿಗೆ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರೆ, ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾಗಾಗಿ ಚಿಕ್ಕೋಡಿ ಕ್ಷೇತ್ರದ ಲಾಬಿ ಮಾಡಿ ಯಶಕಂಡಿದ್ದಾರೆ. ನಿನ್ನೆ ಬಾಗಲಕೋಟೆಯ ವೀಣಾ ಕಾಶಪ್ಪನವರ್ ಟಿಕೆಟ್ ತಪ್ಪಿದ್ದಕ್ಕೆ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. ಕ್ಷೇತ್ರದ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಪಾಲಾದಂತಿದೆ. ಹಾಗೆಯೇ, ಮೈಸೂರು-ಕೊಡಗು ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಟಿಕೆಟ್ ಸಿಗದಿದ್ದರೆ ವೀಣಾ ಕಾಶಪ್ಪನವರ್ ಬಂಡಾಯವೇಳಲಿದ್ದಾರೆಯೇ? ಅವರ ಮಾತುಗಳಲ್ಲಿ ಸುಳಿವನ್ನು ಗುರುತಿಸಬಹುದು!