ಮೆಟ್ರೋ ರೈಲು ಮುಂದೆ ಹಾರಿ ಪ್ರಾಣ ಕಳೆದುಕೊಂಡ ಕಾನೂನು ವಿದ್ಯಾರ್ಥಿ, ಬಿಎಂಆರ್ ಸಿಎಲ್ ಅಧಿಕಾರಿ ವಿವರಣೆ ಏನು?
ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಮೆಟ್ರೋ ಸುರಕ್ಷತೆಯ ಬಗ್ಗೆ ಕೇಳಿಬರುತ್ತಿರುವ ಅಪಸ್ವರಗಳ ಬಗ್ಗೆ ಪ್ರಸ್ತಾಪಿಸಿದಾಗ ಅಧಿಕಾರಿಯು, ಎಲ್ಲ ಘಟನೆಗಳು ಒಂದೇ ತೆರನಾಗಿರಲ್ಲ ಮತ್ತು ಅವೆಲ್ಲವುಗಳಿಗೆ ಒಂದೇ ಉತ್ತರ ನೀಡಲಾಗಲ್ಲ ಎಂದು ಹೇಳಿದರು. ಸದ್ಯಕ್ಕೆ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಮಾತ್ರ ತಡೆಗೋಡೆಯ ವ್ಯವಸ್ಥೆ ಮಾಡಲಾಗಿದೆ, ಸ್ಕ್ರೀನ್ ಡೋರ್ ಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರು: ಇಂದು ಮಧ್ಯಾಹ್ನ ಚಂದ್ರಾ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ (Attiguppe Metro station) ನ್ಯಾಷನಲ್ ಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಧೃವ್ ಠಕ್ಕರ್ (Dhruv Thakkar) ಹೆಸರಿನ 19-ವರ್ಷದ ಯುವಕ ರೈಲು ಬರುವಾಗ ಟ್ರ್ಯಾಕ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬಿಎಂಅರ್ ಸಿಎಲ್ ಅಧಿಕಾರಿಯೊಬ್ಬರು (BMRCL official) ತಮ್ಮ ಸಂಸ್ಥೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿದರು. ಘಟನೆ ನಡೆದ ಬಳಿಕ ಸಂಬಂಧಪಟ್ಟ ಮೆಟ್ರೋ ನಿಲ್ದಾಣದ ಅಧಿಕಾರಿಗಳು ಪೊಲೀಸ್ ಗೆ ಮಾಹಿತಿ ರವಾನಿಸಿದ ಬಳಿಕ ಅವರು ಸ್ಥಳಕ್ಕೆ ಬಂದು ಮಹಜರ್ ನಡೆಸಿದ್ದಾರೆ, ವಿಪತ್ತು ನಿರ್ವಹಣೆ ಮತ್ತು ಅಪಘಾತದಂಥ ಸಂದರ್ಭಗಳಲ್ಲಿ ಬಿಎಂಆರ್ಸಿಎಲ್ ತನ್ನ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ವಯ ಕಾರ್ಯನಿರ್ವಹಿಸುತ್ತದೆ ಎಂದು ಅಧಿಕಾರಿ ಹೇಳಿದರು. ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಮೆಟ್ರೋ ಸುರಕ್ಷತೆಯ ಬಗ್ಗೆ ಕೇಳಿಬರುತ್ತಿರುವ ಅಪಸ್ವರಗಳ ಬಗ್ಗೆ ಪ್ರಸ್ತಾಪಿಸಿದಾಗ ಅಧಿಕಾರಿಯು, ಎಲ್ಲ ಘಟನೆಗಳು ಒಂದೇ ತೆರನಾಗಿರಲ್ಲ ಮತ್ತು ಅವೆಲ್ಲವುಗಳಿಗೆ ಒಂದೇ ಉತ್ತರ ನೀಡಲಾಗಲ್ಲ ಎಂದು ಹೇಳಿದರು. ಸದ್ಯಕ್ಕೆ ಮೆಜೆಸ್ಟಿಕ್ ಮೆಟ್ರೋನಿಲ್ದಾಣದಲ್ಲಿ ಮಾತ್ರ ತಡೆಗೋಡೆಯ ವ್ಯವಸ್ಥೆ ಮಾಡಲಾಗಿದೆ, ಸ್ಕ್ರೀನ್ ಡೋರ್ ಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ಅಗ್ನಿ ಅವಘಡ; ಸುಟ್ಟು ಕರಕಲಾದ 4 ಬೈಕ್ಗಳು