ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಹೆಬ್ಬಾಳ್ಕರ್
ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತದ ಬಗ್ಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ನೆನಪಿಸಿಕೊಂಡಿದ್ದಾರೆ. ಇಂದು (ಜನವರಿ 13) ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಕಾರು ಅಪಘಾತಗೊಂಡು ಇವತ್ತಿಗೆ ಒಂದು ವರ್ಷವಾಗಿದೆ. ಒಂದು ವರ್ಷದ ಹಿಂದೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರೆ ಎಲ್ಲರೂ ಒಂದು ವರ್ಷದ ಜಯಂತಿ ಮಾಡುತ್ತಿದ್ರಿ. ನಿಮ್ಮೆಲ್ಲರ ಆಶೀರ್ವಾದಿಂದ ಸೇವೆ ಮಾಡುವ ಸಲುವಾಗಿ ಬದುಕಿದ್ದೇನೆ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡರು.
ಬೆಳಗಾವಿ, (ಜನವರಿ 13): ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತದ ಬಗ್ಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನೆನಪಿಸಿಕೊಂಡಿದ್ದಾರೆ. ಇಂದು (ಜನವರಿ 13) ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಕಾರು ಅಪಘಾತಗೊಂಡು (Car Accident) ಇವತ್ತಿಗೆ ಒಂದು ವರ್ಷವಾಗಿದೆ. ಒಂದು ವರ್ಷದ ಹಿಂದೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರೆ ಎಲ್ಲರೂ ಒಂದು ವರ್ಷದ ಜಯಂತಿ ಮಾಡುತ್ತಿದ್ರಿ. ನಿಮ್ಮೆಲ್ಲರ ಆಶೀರ್ವಾದಿಂದ ಸೇವೆ ಮಾಡುವ ಸಲುವಾಗಿ ಬದುಕಿದ್ದೇನೆ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡರು.
ಇನ್ನು ಇದೇ ವೇಳೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರ ರೀತಿ ಬೆಳೆಯಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ನಾನು ಜನನಾಯಕಿ ಅನ್ನಿಸಿಕೊಳ್ಳಬೇಕೆಂಬ ಹುಚ್ಚು ಹಂಬಲವಿದೆ. ನಾನು ಶಾಸಕಿಯಾದ ಮೇಲೆ ಗಲಭೆ, ಜಾತಿ ರಾಜಕಾರಣ ಮಾಡಿಲ್ಲ. ನಾನು ಪೊಲೀಸರ ಮೇಲೂ ಒತ್ತಡ ಹಾಕಿಲ್ಲ. ಕುವೆಂಪು ಹೇಳಿದಂತೆ ನಮ್ಮ ಕ್ಷೇತ್ರ ಶಾಂತಿಯ ತೋಟವಾಗಿದೆ. ಎಲ್ಲರೂ ಅನ್ಯೋನ್ಯವಾಗಿ ಒಟ್ಟಾಗಿ ಹೋಗೋಣ, ಬಾಳೋಣ. ನನ್ನ ಕಾರು ಅಪಘಾತಗೊಂಡು ಇವತ್ತಿಗೆ ಒಂದು ವರ್ಷವಾಗಿದೆ. ಎಲ್ಲಿಯೂ ಓಡಾಡಬೇಡಿ ಎಂದು ಯುವರಾಜ ಅಣ್ಣ ಹೇಳಿದ್ರು. ಆದ್ರೆ ನಾನು ಸಾಧನೆ ಮಾಡುವುದು, ಹೆಸರು ಗಳಿಸಬೇಕಿದೆ. ಜನನಾಯಕಿ ಅನ್ನಿಸಿಕೊಳ್ಳಬೇಕು ಎಂಬ ಹುಚ್ಚು, ಹಂಬಲವಿದೆ. ಸಿದ್ದರಾಮಯ್ಯ, ಯಡಿಯೂರಪ್ಪಗೆ ಜನಪ್ರಿಯ ನಾಯಕ ಅಂತೀವಿ. ಅದೇ ರೀತಿ ಜನಪ್ರಿಯ ನಾಯಕಿ ಅನ್ನಿಸಿಕೊಳ್ಳಬೇಕೆಂಬ ಹುಚ್ಚಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
