AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಯ್ ನೋಡ್ರಪ್ಪ ಅದೇ ಫೈನಲ್: ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?

ಏಯ್ ನೋಡ್ರಪ್ಪ ಅದೇ ಫೈನಲ್: ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?

ರಾಮ್​, ಮೈಸೂರು
| Edited By: |

Updated on: Jan 13, 2026 | 4:13 PM

Share

ಕರ್ನಾಟಕ ಕಾಂಗ್ರೆಸ್‌ನಲ್ಲಿ‌ (Congress) ನವೆಂಬರ​​ನಿಂದಲೇ ಕುರ್ಚಿ ಕಾಳಗ ಜೋರಾಗಿಯೇ ನಡೆದಿದೆ. ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೊಟ್ಟ ಮಾತು ನೆನಪಿಸುತ್ತಿದ್ದರೆ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ (Siddaramaiah) ಹೈಕಮಾಂಡ್ ನಾಯಕರ ಮಾತೇ ನನಗೆ ಶಾಸನ ಎನ್ನುತ್ತಿದ್ದಾರೆ. ಈ ಕಾಳಗದ ನಡುವೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿಯನ್ನ (Rahul Gandhi) ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ತೆರಳಳು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಸ್ವಾಗತಿಸಿದರು. ಈ ವೇಳೆ ಕೆಲ ನಿಮಿಷಗಳ ಕಾಲ ರಾಹುಲ್ ಗಾಂಧಿ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮೈಸೂರು, (ಜನವರಿ 13): ಕರ್ನಾಟಕ ಕಾಂಗ್ರೆಸ್‌ನಲ್ಲಿ‌ (Karnataka Congress) ನವೆಂಬರ​​ನಿಂದಲೇ ಕುರ್ಚಿ ಕಾಳಗ ಜೋರಾಗಿಯೇ ನಡೆದಿದೆ. ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೊಟ್ಟ ಮಾತು ನೆನಪಿಸುತ್ತಿದ್ದರೆ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ (Siddaramaiah) ಹೈಕಮಾಂಡ್ ನಾಯಕರ ಮಾತೇ ನನಗೆ ಶಾಸನ ಎನ್ನುತ್ತಿದ್ದಾರೆ. ಈ ಕಾಳಗದ ನಡುವೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿಯನ್ನ (Rahul Gandhi) ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ತೆರಳಳು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಸ್ವಾಗತಿಸಿದರು. ಈ ವೇಳೆ ಕೆಲ ನಿಮಿಷಗಳ ಕಾಲ ರಾಹುಲ್ ಗಾಂಧಿ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಮ್ಮಲ್ಲಿ ಯಾವ ಗೊಂದಲ ಇಲ್ಲ, ಯಾವ ಸಮಸ್ಯೆಯೂ ಇಲ್ಲ. ಊಹಾಪೋಹ ಬಗ್ಗೆ ಚರ್ಚೆ ಮಾಡ್ತಿರುವುದು ಮಾಧ್ಯಮದವರು. ಯಾರೋ ಎಂಎಲ್ಎ ಏನೂ ಗೊತ್ತಿಲ್ಲದೆ ಏನೋ ಹೇಳುತ್ತಾರೆ. ಅವರಿಗೆ ಏನು ಗೊತ್ತು? ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ.ಶಿವಕುಮಾರ್. ಡಿಸಿಎಂ ಡಿ.ಕೆ.ಶಿವಕುಮಾರ್ ಏನಾದರೂ ಮಾತನಾಡಿದ್ದಾರಾ? ನಾನೇನಾದರೂ ಮಾತನಾಡಿದ್ದೀನಾ? ಮಾಹಿತಿ ಇಲ್ಲದ MLA ಹೇಳಿದ್ದಕ್ಕೆ ಪ್ರತಿಕ್ರಿಯೆ ಕೇಳಿದರೆ ಹೇಗೆ? ನಮ್ಮಲ್ಲಿ ಯಾವ ಗೊಂದಲ ಇಲ್ಲ. ಯಾವ ಚರ್ಚೆಯೂ ಇಲ್ಲ.ಖರ್ಗೆ, ಡಿ.ಕೆ.ಶಿವಕುಮಾರ್​ ಜೊತೆ ನಾನು ಮಾತನಾಡಿದ್ದೇನೆ. ಎಲ್ಲೂ ಯಾರ ಅಪಸ್ವರ ಇಲ್ಲ, ಯಾವ ಸಮಸ್ಯೆಯೂ ಇಲ್ಲ. ಏನೇ ತೀರ್ಮಾನಗಳಿದ್ದರೂ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವೆಂದು ನಾನು, ಡಿಕೆ ಹೇಳಿದ್ದೇವೆ. ಸದ್ಯಕ್ಕೆ ನಾನೇನು ದೆಹಲಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಜಟಾಪಟಿ ಸಂಕ್ರಾಂತಿ ಬಳಿಕ ಮತ್ತಷ್ಟು ಚುರುಕು? ಸಿಕ್ತು ಮಹತ್ವದ ಸುಳಿವು