ಕೋಲಾರ: ಸರ್ಕಾರೀ ಕಾರ್ಯಕ್ರಮವೊಂದರಲ್ಲಿ ರಾಹುಲ್ ಪರ ಘೋಷಣೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಮುನಿರತ್ನ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 14, 2022 | 2:26 PM

ಇದು ಸರ್ಕಾರೀ ಕಾರ್ಯಕ್ರಮ, ಮುಖ್ಯಮಂತ್ರಿ ಯಾರು, ಜ್ಞಾನ ಇಟ್ಕೊಂಡು ಕೆಲಸ ಮಾಡಿ ಅಂತ ಸಚಿವರು ಅಧಿಕಾರಿಯೊಬ್ಬರಿಗೆ ಕೋಪದಿಂದ ಹೇಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು.

ಕೋಲಾರ: ಸರ್ಕಾರೀ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜನರಲ್ಲಿ ಕೆಲವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪರ ಘೋಷಣೆಗಳನ್ನು ಕೂಗಿದ್ದು ಕೇಳಿ ಸಿಡಿಮಿಡಿಗೊಂಡ ಸಚಿವ ಮುನಿರತ್ನ ನಾಯ್ಡು (Munirathna Naidu) ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಕರಣ ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ (KJF) ನಡೆಯಿತು. ನೂತನ ಪಂಚಾಯತಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಬೆಂಬಲಿಗರ ಜೊತೆ ಕಾಂಗ್ರೆಸ್ ಬೆಂಬಲಿಗರೂ ಸೇರಿದ್ದರು. ಬಿಜೆಪಿಯವರು ಮೋದಿ ಮೋದಿ ಅಂತ ಕೂಗಿದರೆ ಕಾಂಗ್ರೆಸ್ ನವರು ರಾಹುಲ್ ರಾಹುಲ್ ಅಂದರು. ಇದು ಸರ್ಕಾರೀ ಕಾರ್ಯಕ್ರಮ, ಮುಖ್ಯಮಂತ್ರಿ ಯಾರು, ಜ್ಞಾನ ಇಟ್ಕೊಂಡು ಕೆಲಸ ಮಾಡಿ ಅಂತ ಸಚಿವರು ಅಧಿಕಾರಿಯೊಬ್ಬರಿಗೆ ಕೋಪದಿಂದ ಹೇಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು.