ಟಿವಿ9 ಕನ್ನಡ ಪ್ರಾಯೋಜಕತ್ವದ ಆಟೋಮೊಬೈಲ್ ಎಕ್ಸ್​ಪೋ-2022 ಇಂದಿನಿಂದ ಆರಂಭ

ಟಿವಿ9 ಕನ್ನಡ ಪ್ರಾಯೋಜಕತ್ವದ ಆಟೋಮೊಬೈಲ್ ಎಕ್ಸ್​ಪೋ-2022 ಇಂದಿನಿಂದ ಆರಂಭ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 14, 2022 | 1:16 PM

ಎಕ್ಸ್ ಪೋ ಉದ್ಘಾಟನೆಗೆ ಕನ್ನಡ ಪ್ರತಿಭಾವಂತ ಬಹುಭಾಷಾ ನಟ ಡಾಲಿ ಧನಂಜಯ, ಉದಯೋನ್ಮುಖ ನಟಿ ಐಶಾನಿ ಶೆಟ್ಟಿ, ಜೆಡಿ(ಎಸ್) ನಾಯಕ ಟಿ ಎ ಸರವಣ ಆಗಮಿಸಿದ್ದರು.

ಬೆಂಗಳೂರು: ಟಿವಿ9 ಕನ್ನಡ ವಾಹಿನಿ ಮತ್ತು ಟಿವಿ9 ನೆಟ್​ವರ್ಕ್ ಪ್ರಾಯೋಜಿಸುತ್ತಿರುವ ಆಟೋಮೊಬೈಲ್, ಲೈಫ್ ಸ್ಟೈಲ್ ಮತ್ತು ಫರ್ನಿಚರ್ ಎಕ್ಸ್​ಪೋ-2022 (Automobile Expo 2022) ಇಂದಿನಿಂದ ಅಂದರೆ ಶುಕ್ರವಾರದಿಂದ ತ್ರಿಪುರವಾಸಿನಿ (Tripuravasini) ಅರಮನೆ ಮೈದಾನದಲ್ಲಿ ಅರಂಭಗೊಂಡಿದೆ. ಈ ಬಾರಿಯ ಎಕ್ಸ್ ಪೋ ಉದ್ಘಾಟನೆಗೆ ಕನ್ನಡ ಪ್ರತಿಭಾವಂತ ಬಹುಭಾಷಾ ನಟ ಡಾಲಿ ಧನಂಜಯ (Daali Dhananjay), ಉದಯೋನ್ಮುಖ ನಟಿ ಐಶಾನಿ ಶೆಟ್ಟಿ, ಜೆಡಿ(ಎಸ್) ನಾಯಕ ಟಿ ಎ ಸರವಣ ಆಗಮಿಸಿದ್ದರು. ಎಕ್ಸ್ ಪೋ ಮೂರು ದಿನಗಳ ಕಾಲ ನಡೆಯಲಿದ್ದು ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ. ಎಕ್ಸ್ ಪೋ ಸದುಪಯೋಗಪಡೆದುಕೊಂಡು ಹೆಸರಾಂತ್ ಬ್ರ್ಯಾಂಡ್ ಗಳನ್ನು ಯೋಗ್ಯ ಬೆಲೆಯಲ್ಲಿ ಕೊಳ್ಳಬಹುದಾಗಿದೆ.