ಪತ್ನಿ ಭವಾನಿಯೊಂದಿಗೆ ಹಾಸನಾಂಬೆಯ ದರ್ಶನ ಪಡೆದ ಶಾಸಕ ಹೆಚ್ ಡಿ ರೇವಣ್ಣ
ಉತ್ಸವದ ಎರಡನೇ ದಿನವಾಗಿರುವ ಇಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ತಮ್ಮ ಧರ್ಮಪತ್ನಿ ಭವಾನಿ ರೇವಣ್ಣ ಅವರೊಂದಿಗೆ ಹಾಸನಾಂಬೆಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಹಾಸನ: ಒಂದೂವರೆ ವಾರಗಳ ಕಾಲ ಕರ್ನಾಟಕ ಮತ್ತು ನೆರೆರಾಜ್ಯಗಳ ಲಕ್ಷಾಂತರ ಭಕ್ತರನ್ನು ಸೆಳೆಯುವ 10 ದಿನಗಳ ನಡೆಯುವ ಹಾಸನಾಂಬೆ ದರ್ಶನೋತ್ಸವ ಗುರುವಾರ ಆರಂಭಗೊಂಡಿದೆ, ಉತ್ಸವದ ಎರಡನೇ ದಿನವಾಗಿರುವ ಇಂದು ಮಾಜಿ ಸಚಿವ ಮತ್ತು ಜೆಡಿ(ಎಸ್) ಶಾಸಕ ಹೆಚ್ ಡಿ ರೇವಣ್ಣ ಅವರು ತಮ್ಮ ಧರ್ಮಪತ್ನಿ ಭವಾನಿ ರೇವಣ್ಣ ಅವರೊಂದಿಗೆ ಹಾಸನಾಂಬೆಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಭವಾನಿ ಅವರು ಅರ್ಚಕರಿಂದ ಭಕ್ತಿ ಮತ್ತು ವಿನೀತ ಭಾವದಿಂದ ಪ್ರಸಾದ ಸ್ವೀಕರಿಸುತ್ತಿರುವುದನ್ನು ನೋಡಬಹುದು.
Latest Videos