ನಟಿ ರಾಗಿಣಿ ಯಾರು ಎಂಬುದು ನನಗೆ ಗೊತ್ತೇ ಇಲ್ಲ.. ಮತ್ತೊಬ್ಬ ಸಚಿವರ ಅಹವಾಲು!

[lazy-load-videos-and-sticky-control id=”DURv_fDRQjc”] ಚಾಮರಾಜನಗರ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ಪ್ರಕರಣದಲ್ಲಿ ನಟಿ ರಾಗಿಣಿ ಬಂಧನ ಹಿನ್ನೆಲೆ, ಚಾಮರಾಜನಗರದಲ್ಲಿ ತೋಟಗಾರಿಕೆ ಸಚಿವ ಕೆಸಿ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ. ನಟಿ ರಾಗಿಣಿಯನ್ನು ಬಂಧನ ಮುಕ್ತಗೊಳಿಸುವಂತೆ ಯಾವುದೇ ನಾಯಕರ ಒತ್ತಡ ಇಲ್ಲ. ನಟಿ ರಾಗಿಣಿಯನ್ನು ಡ್ರಗ್ಸ್ ಜಾಲದಿಂದ ಕೈ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ಸಚಿವ ಸಿ.ಟಿ ರವಿ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ ಎಂದಿದ್ದಾರೆ. ನಟಿ ರಾಗಿಣಿ ಯಾರು ಎಂದು ನನಗೆ ಗೊತ್ತೇ ಇಲ್ಲ, ಚುನಾವಣೆಯಲ್ಲಿ ನನ್ನ ಬೆಂಬಲಿಗರು ಪ್ರಚಾರಕ್ಕೆ […]

ನಟಿ ರಾಗಿಣಿ ಯಾರು ಎಂಬುದು ನನಗೆ ಗೊತ್ತೇ ಇಲ್ಲ.. ಮತ್ತೊಬ್ಬ ಸಚಿವರ ಅಹವಾಲು!

Updated on: Sep 07, 2020 | 5:44 PM

[lazy-load-videos-and-sticky-control id=”DURv_fDRQjc”]

ಚಾಮರಾಜನಗರ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ಪ್ರಕರಣದಲ್ಲಿ ನಟಿ ರಾಗಿಣಿ ಬಂಧನ ಹಿನ್ನೆಲೆ, ಚಾಮರಾಜನಗರದಲ್ಲಿ ತೋಟಗಾರಿಕೆ ಸಚಿವ ಕೆಸಿ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

ನಟಿ ರಾಗಿಣಿಯನ್ನು ಬಂಧನ ಮುಕ್ತಗೊಳಿಸುವಂತೆ ಯಾವುದೇ ನಾಯಕರ ಒತ್ತಡ ಇಲ್ಲ. ನಟಿ ರಾಗಿಣಿಯನ್ನು ಡ್ರಗ್ಸ್ ಜಾಲದಿಂದ ಕೈ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ಸಚಿವ ಸಿ.ಟಿ ರವಿ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ ಎಂದಿದ್ದಾರೆ.

ನಟಿ ರಾಗಿಣಿ ಯಾರು ಎಂದು ನನಗೆ ಗೊತ್ತೇ ಇಲ್ಲ, ಚುನಾವಣೆಯಲ್ಲಿ ನನ್ನ ಬೆಂಬಲಿಗರು ಪ್ರಚಾರಕ್ಕೆ ಕರೆಸಿದ್ದರು. ಆದರೆ ಸಿನಿಮಾ ರಂಗಕ್ಕೂ ನನಗೂ ಯಾವುದೇ ನಂಟಿಲ್ಲ. ಆದರಿಂದ ಆಕೆ ಡ್ರಗ್ಸ್ ಸೇವಕಿ ಎಂದು ನಮಗೆ ಗೊತ್ತಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Published On - 2:39 pm, Mon, 7 September 20