ಹಿಟ್ ಅಂಡ್ ರನ್ನಂತೆ ಪ್ರಿಯಾಂಕ್ ಖರ್ಗೆ ಸ್ಪಿಟ್ ಅಂಡ್ ರನ್ ಆಸಾಮಿ!: ಪ್ರತಾಪ್ ಸಿಂಹ
ಕಾಂಗ್ರೆಸ್ ಸರ್ಕಾರದಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನೇ ಕಳಂಕಿತರು, ಇನ್ನು ಪ್ರಿಯಾಂಕ್ ಖರ್ಗೆಯಂಥ ಕಳಂಕಿತರನ್ನು ಜೊತೆಗಿಟ್ಟುಕೊಂಡು ಅವರು ಮತ್ತಷ್ಟು ಕೆಟ್ಟ ಹೆಸರು ತಂದುಕೊಳ್ಳುತ್ತಿದ್ದಾರೆ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು ಜನಕ್ಕೆ ಗೊತ್ತಾಗಿದೆ, ನಾಳೆಯೇನಾದರೂ ವಿಧಾನಸಭಾ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳೀಪಟ ಆಗೋದು ಶತಸಿದ್ಧ ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬೆಂಕಿಯುಗುಳಿದರು. ವಿರೋಧ ಪಕ್ಷದಲ್ಲಿದ್ದಾಗ ಸರ್ಕಾರದ ವಿರುದ್ಧ ಹತ್ತಾರು ಆರೋಪ ಮಾಡುತ್ತಿದ್ದ ಖರ್ಗೆ ಈಗ ತದ್ವಿರುದ್ಧ ಧೋರಣೆ ಪ್ರದರ್ಶಿಸುತ್ತಿದ್ದಾರೆ, ಹಿಟ್ ಅಂಡ್ ರನ್ ಪ್ರಕರಣಗಳ ಹಾಗೆ ಈ ಆಸಾಮಿ ಸ್ಪಿಟ್ ಅಂಡ್ ರನ್! ಬೇರೆಯವರ ಮೇಲೆ ಉಗಿದು ಓಡಿಹೋಗುವವ ಎಂದು ಸಿಂಹ ಹೇಳಿದರು. ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮೀಶನ್, ಬಿಟ್ ಕಾಯಿನ್ ಹಗರಣ ಮತ್ತು ಪಿಎಸ್ಐ ನೇಮಕಾತಿ ಅಕ್ರಮ ಅಂತ ಪ್ರತಿದಿನ ಕೂಗಾಡುತ್ತಿದ್ದ ಖರ್ಗೆ ಕಳೆದ ಒಂದೂವರೆ ವರ್ಷಗಳಿಂದ ಅವರದ್ದೇ ಸರ್ಕಾರ ಅಧಿಕಾರದಲ್ಲಿದೆ, ಯಾವ ಪ್ರಕರಣವನ್ನಾದರೂ ತನಿಖೆ ಮಾಡಿಸಿದ್ರಾ? ಸಚಿನ್ ಪಾಂಚಾಳ್ ಸಾವಿನ ಪ್ರಕರಣದಲ್ಲಿ ಅವರ ಅಪ್ತ ಕಾರ್ಯದರ್ಶಿಯ ಹೆಸರು ಉಲ್ಲೇಖವಾಗಿದ್ದರೂ ಖರ್ಗೆ ಯಾಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಸಿಂಹ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ಕೇಸ್ ಮುಚ್ಚಿ ಹಾಕಲು ಸರ್ಕಾರದ ಯತ್ನ, ಸಹೋದರಿ ಗಂಭೀರ ಆರೋಪ