Absurd comment: ಸಿಸಿಬಿ ಮತ್ತು ಸಿಐಡಿ ಏಜೆನ್ಸಿಗಳ ಕರ್ತವ್ಯ ನಿಷ್ಠೆ ಮತ್ತು ವಿಶ್ವಾಸಾರ್ಹತೆ ಮೇಲೆ ಸಚಿವ ಪ್ರಿಯಾಂಕ್ ಖರ್ಗೆಗೆ ನಂಬಿಕೆ ಇಲ್ಲವೇ?

|

Updated on: Jun 28, 2023 | 1:18 PM

ಒಬ್ಬ ಸಚಿವನೇ ಈ ಸರಕಾರೀ ಸಂಸ್ಥೆಗಳ ಕರ್ತವ್ಯ ನಿಷ್ಠೆ ಬಗ್ಗೆ ಹೀಗೆ ಹಗುರವಾಗಿ ಮಾತಾಡಿದರೆ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವುದಿಲ್ಲವೇ?

ಬೆಂಗಳೂರು: ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರೆದ ಸಂಪುಟ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಒಳಗೆ ಹೋಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಬಿಟ್ ಕಾಯಿನ್ ಹಗರಣದ (Bitcoin scam) ತನಿಖೆಯನ್ನು ಸಿಐಡಿ ಅಥವಾ ಸಿಸಿಬಿ (CID and CCB) ವಹಿಸಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ತನಿಖೆಯನ್ನು ಆ ಏಜೆನ್ಸಿಗಳ ಸುಪರ್ದಿಗೆ ಒಪ್ಪಿಸುವುದು ಕಳ್ಳನ ಕೈಗೆ ಕೀಲಿ ಕೈ ಕೊಟ್ಟ ಹಾಗೆ ಅಂತ ಹೇಳಿದರು. ಸಚಿವರು ಹೇಳಿದ ಮಾತನ್ನು ಜೀರ್ಣಿಸಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ ಮಾರಾಯ್ರೆ. ಖರ್ಗೆ ಮಾತನ್ನೇ ನಂಬುವುದಾದರೆ, ಸರ್ಕಾರಕ್ಕೆ ಅದರ ಏಜೆನ್ಸಿಗಳಾಗಿರುವ ಸಿಸಿಬಿ ಮತ್ತು ಸಿಐಡಿಗಳ ವಿಶ್ವಾಸಾರ್ಹತೆ ಮೇಲೆ ನಂಬಿಕೆ ಇಲ್ಲವೇ? ಒಬ್ಬ ಸಚಿವನೇ ಈ ಸರಕಾರೀ ಸಂಸ್ಥೆಗಳ ಕರ್ತವ್ಯ ನಿಷ್ಠೆ ಬಗ್ಗೆ ಹೀಗೆ ಹಗುರವಾಗಿ ಮಾತಾಡಿದರೆ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವುದಿಲ್ಲವೇ? ಅದಕ್ಕೂ ಮುಖ್ಯ ಸಂಗತಿಯೆಂದರೆ ಇದು ಗೃಹ ಇಲಾಖೆಗೆ ಸಂಬಂಧಿಸಿದ ವಿಷಯ. ಖರ್ಗೆ ಮಾತಾಡುವಾಗ ಈ ವಿಷಯ ತಮ್ಮ ಇಲಾಖೆಯ ಸುಪರ್ದಿಗೆ ಬಾರದ ಸಂಗತಿ ಅಂತ ಹೇಳಿದ್ದರೆ ಸಾಕಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ