ಆಜಾನ್ ಕೇಳುತ್ತಿದ್ದಂತೆ ಭಾಷಣ ನಿಲ್ಲಿಸಿದ ಸಚಿವ ಸಂತೋಷ್ ಲಾಡ್
ಸಚಿವ ಸಂತೋಷ್ ಲಾಡ್ ಅವರು ಆಜಾನ್ ಕೇಳುತ್ತಿದ್ದಂತೆ ಕಾರ್ಯಕ್ರಮವೊಂದರಲ್ಲಿ ಅರ್ಧಕ್ಕೆ ಭಾಷಣ ನಿಲ್ಲಿಸಿ ಮತ್ತೆ ಮಾತಾಡಿದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ. ಇಂದು (ಅಕ್ಟೋಬರ್ 05) ಹುಬ್ಬಳ್ಳಿ ನಗರದ ಗುಡಿಹಾಳ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಭಾಷಣದ ವೇಳೆ ಅಜಾನ್ ಶುರುವಾಗಿದೆ. ಕೂಡಲೇ ಸಂತೋಷ್ ಲಾಡ್ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ. ಬಳಿಕ ಅಜಾನ್ ಮುಕ್ತಾಯವಾಗುತ್ತಿದ್ದಂತೆಯೇ ಮತ್ತೆ ತಮ್ಮ ಭಾಷಣವನ್ನು ಮುಂದುರೆಸಿದ್ದಾರೆ.
ಹುಬ್ಬಳ್ಳಿ, (ಅಕ್ಟೋಬರ್ 05): ಸಚಿವ ಸಂತೋಷ್ ಲಾಡ್ ಅವರು ಆಜಾನ್ ಕೇಳುತ್ತಿದ್ದಂತೆ ಕಾರ್ಯಕ್ರಮವೊಂದರಲ್ಲಿ ಅರ್ಧಕ್ಕೆ ಭಾಷಣ ನಿಲ್ಲಿಸಿ ಮತ್ತೆ ಮಾತಾಡಿದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ. ಇಂದು (ಅಕ್ಟೋಬರ್ 05) ಹುಬ್ಬಳ್ಳಿ ನಗರದ ಗುಡಿಹಾಳ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಭಾಷಣದ ವೇಳೆ ಅಜಾನ್ ಶುರುವಾಗಿದೆ. ಕೂಡಲೇ ಸಂತೋಷ್ ಲಾಡ್ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ. ಬಳಿಕ ಅಜಾನ್ ಮುಕ್ತಾಯವಾಗುತ್ತಿದ್ದಂತೆಯೇ ಮತ್ತೆ ತಮ್ಮ ಭಾಷಣವನ್ನು ಮುಂದುರೆಸಿದ್ದಾರೆ.
