Hubballi News: ಗರ್ಭಿಣಿ ಹೊತ್ತ ಅಂಬ್ಯುಲೆನ್ಸ್ ಸೈರನ್ ಬಾರಿಸುತ್ತಿದ್ದರೂ ಸಚಿವ ಸಂತೋಷ್ ಲಾಡ್ ಜೊತೆಗಿದ್ದ ವಾಹನಗಳು ಬೇಗ ದಾರಿ ಬಿಡಲಿಲ್ಲ!

|

Updated on: Jul 28, 2023 | 3:09 PM

ಗರ್ಭಿಣಿಯ ಸ್ಥಿತಿ ಆತಂಕಕಾರಿಯಾಗಿದ್ದ ಕಾರಣಕ್ಕೆ ಅಂಬ್ಯುಲೆನ್ಸ್ ನಲ್ಲಿ ಸಾಗಿಸುತ್ತಿರುವುದು ಸುಲಭಕ್ಕೆ ಅರ್ಥವಾಗುವ ಸಂಗತಿ. ಆದರೆ ಸಚಿವರೊಂದಿಗಿದ್ದ ಜನರಿಗೆ ಅರ್ಥವಾಗದಿರೋದು ದುರದೃಷ್ಟಕರ.

ಹುಬ್ಬಳ್ಳಿ: ಸಚಿವರು ನೆರೆಪೀಡಿತ ಪ್ರದೇಶಗಳಿಗೆ (flood affected areas) ಭೇಟಿ ನೀಡಿ ಸಂತ್ರಸ್ತರ ಸಂಕಷ್ಟಗಳನ್ನು ಆಲಿಸುವುದು ಒಳ್ಳೆಯ ಕೆಲಸ ಮತ್ತು ಪ್ರತಿಯೊಬ್ಬ ಸಚಿವ ಅದನ್ನು ಮಾಡಬೇಕು. ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ತಮ್ಮ ಕ್ಷೇತ್ರದ ಕುಂದಗೋಳ ತಾಲ್ಲೂಕಿನ ಹಲವು ಗ್ರಾಮಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅವರ ಹಿಂದೆ ರಸ್ತೆ ತುಂಬ ಅಧಿಕಾರಿ ಮತ್ತು ಬೆಂಬಲಿಗರ ಕಾರುಗಳು. ಈ ವಾಹನಗಳ ಹಿಂಡಿನಲ್ಲಿ ಗರ್ಭಿಣಿಯೊಬ್ಬರನ್ನು (pregnant woman) ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ (ambulance) ಸಿಕ್ಕಿಕೊಂಡಿದೆ. ಗರ್ಭಿಣಿಯ ಸ್ಥಿತಿ ಆತಂಕಕಾರಿಯಾಗಿದ್ದ ಕಾರಣಕ್ಕೆ ಅಂಬ್ಯುಲೆನ್ಸ್ ನಲ್ಲಿ ಸಾಗಿಸುತ್ತಿರುವುದು ಸುಲಭಕ್ಕೆ ಅರ್ಥವಾಗುವ ಸಂಗತಿ. ಆದರೆ, ಅದಕ್ಕೆ ದಾರಿಮಾಡಿಕೊಡಬೇಕು ಎಂಬ ಪರಿಜ್ಞಾನ ವಿಡಿಯೋದಲ್ಲಿ ಕಾಣಿತ್ತಿರುವ ವಾಹನಗಳ ಮಾಲೀಕರಿಗೆ, ಚಾಲಕರಿಗೆ ಇಲ್ಲ. ಅಂಬ್ಯುಲೆನ್ಸ್ ಸೈರನ್ ಒಂದೇ ಸಮ ಶಬ್ದ ಮಾಡುತ್ತಿದ್ದರೂ ಅಧಿಕಾರಿಗಳು ಮಂತ್ರಿಯನ್ನು ಓಲೈಸುವ ಕಾರ್ಯದಲ್ಲಿ ನಿರತರಾಗಿದ್ದರು ಅಂತ ಕಾಣುತ್ತದೆ. ಮಂತ್ರಿಗಾದರೂ ಅದು ಅರ್ಥವಾಗಬೇಡವೇ? ಸಿದ್ದರಾಮಯ್ಯ ಸರ್ಕಾರದ ಸಚಿವರು, ಶಾಸಕರು ವಿಐಪಿ ಸಂಸ್ಕೃತಿಯಿಂದ ಬಂದರೆ ಕನ್ನಡಿಗರಿಗೆ ಒಳ್ಳೆಯದಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ