50 ಎಕರೆ ಸವಾಲು ಹಾಕಿದ ಬಿಜೆಪಿ ಮಾಜಿ ಶಾಸಕರಿಗೆ ವಿಡಿಯೋ ಬಿಡ್ಲಾ ಎಂದ ಸಚಿವ ತಂಗಡಗಿ

Edited By:

Updated on: Feb 18, 2026 | 7:02 PM

ಬಿಜೆಪಿ ಮಾಜಿ ಶಾಸಕ ಬಸವರಾಜ್ ಬಸವರಾಜ ದಡೇಸುಗೂರು ಹಾಗೂ ಸಚಿವ ಶಿವರಾಜ್ ತಂಗಡಗಿ ನಡುವೆ ವಾಕ್ಸಮರ ಜೋರಾಗಿದೆ. ನಾನು ರಕ್ತದಲ್ಲಿ ಬರೆದುಕೊಡ್ತೀನಿ ಈ ಬಾರಿ ತಂಗಡಗಿ ಸೋಲುತ್ತಾನೆ. ಇದಕ್ಕೆ 50 ಎಕರೆ ಜಮೀನು ಕೊಡುತ್ತೇನೆ. ಅಕಸ್ಮಾತ್ ನಾನು ಗೆದ್ರೆ ತಂಗಡಗಿ 50 ಎಕರೆ ಜಮೀನು ಕೊಡಬೇಕು ಎಂದು ಬಸವರಾಜ ದಡೇಸುಗೂರು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ನಿನ್ನ ಹತ್ರ ಏನೂ ಇಲ್ಲ ಅಂತಿದ್ದಿ. ಐವತ್ತು ಎಕರೆ ಜಮೀನು ಹೇಗೆ ಬಂತು? ನೂರು ಎಕರೆ ಜಮೀನು ಹೇಗೆ ಬಂತು? ನನ್ನ ಬಗ್ಗೆ ಮಾತಾಡೋ ಮುನ್ನ ನಿನ್ನ ಇತಿಹಾಸ ತಿಳಿದುಕೋ ಪುಣ್ಯಾತ್ಮ. ದೇವದಾಸಿಯರಿಗೆ ಚಪ್ಪಲಿಯಿಂದ ಹೊಡೆದಿದ್ದು ಯಾರು? ಶಿವರಾಜ್ ತಂಗಡಗಿ ಏನೂ ಅಂತಾ ಕ್ಷೇತ್ರದ ಜನರಿಗೆ ಗೊತ್ತಿದೆ. ನಿನ್ನೆ ವಿಡಿಯೋ ಅದನ್ನು ಬಿಡ್ಲಾ ಎಂದು ತಿರುಗೇಟು ನೀಡಿದ್ದಾರೆ.

ಕೊಪ್ಪಳ, (ಫೆಬ್ರವರಿ 18): ಬಿಜೆಪಿ ಮಾಜಿ ಶಾಸಕ ಬಸವರಾಜ್ ಬಸವರಾಜ ದಡೇಸುಗೂರು ಹಾಗೂ ಸಚಿವ ಶಿವರಾಜ್ ತಂಗಡಗಿ ನಡುವೆ ವಾಕ್ಸಮರ ಜೋರಾಗಿದೆ. ನಾನು ರಕ್ತದಲ್ಲಿ ಬರೆದುಕೊಡ್ತೀನಿ ಈ ಬಾರಿ ತಂಗಡಗಿ ಸೋಲುತ್ತಾನೆ. ಇದಕ್ಕೆ 50 ಎಕರೆ ಜಮೀನು ಕೊಡುತ್ತೇನೆ. ಅಕಸ್ಮಾತ್ ನಾನು ಗೆದ್ರೆ ತಂಗಡಗಿ 50 ಎಕರೆ ಜಮೀನು ಕೊಡಬೇಕು ಎಂದು ಬಸವರಾಜ ದಡೇಸುಗೂರು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ನಿನ್ನ ಹತ್ರ ಏನೂ ಇಲ್ಲ ಅಂತಿದ್ದಿ. ಐವತ್ತು ಎಕರೆ ಜಮೀನು ಹೇಗೆ ಬಂತು? ನೂರು ಎಕರೆ ಜಮೀನು ಹೇಗೆ ಬಂತು? ನನ್ನ ಬಗ್ಗೆ ಮಾತಾಡೋ ಮುನ್ನ ನಿನ್ನ ಇತಿಹಾಸ ತಿಳಿದುಕೋ ಪುಣ್ಯಾತ್ಮ. ದೇವದಾಸಿಯರಿಗೆ ಚಪ್ಪಲಿಯಿಂದ ಹೊಡೆದಿದ್ದು ಯಾರು? ಶಿವರಾಜ್ ತಂಗಡಗಿ ಏನೂ ಅಂತಾ ಕ್ಷೇತ್ರದ ಜನರಿಗೆ ಗೊತ್ತಿದೆ. ನಿನ್ನೆ ವಿಡಿಯೋ ಅದನ್ನು ಬಿಡ್ಲಾ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More