Karnataka Assembly Session: ಮತ್ತೊಮ್ಮೆ ಬೆಳಗಾವಿ ಸುದ್ದಿಗೆ ಬರದಂತೆ ಮಹಾರಾಷ್ಟ್ರ ಶಾಸಕ ಆದಿತ್ಯ ಠಾಕ್ರೆಯನ್ನು ಎಚ್ಚರಿಸಿದ ಶಿವರಾಜ್ ತಂಗಡಗಿ
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಅಂತ ಮಹಾರಾಷ್ಟ್ರದ ನಾಯಕರು ದಶಕಗಳಿಂದ ಹೇಳುತ್ತಾ ಬಂದಿದ್ದಾರೆ ಅವರ ಪಾಲಿಗೆ ಹೊಸ ಸೇರ್ಪಡೆ ಉದ್ಧವ್ ಠಾಕ್ರೆ ಶಿವಸೇನಾ ಬಣದ ಶಾಸಕ ಆದಿತ್ಯ ಠಾಕ್ರೆ. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿದ ಠಾಕ್ರೆಗಳಿಗೆ ಸುದ್ದಿಯಲ್ಲಿರುವ ತವಕ. ಹಾಗಾಗೇ ಠಾಕ್ರೆ ಜ್ಯೂನಿಯರ್ ಬೆಳಗಾವಿ ವಿಷಯ ಮಾತಾಡುತ್ತಿದ್ದಾರೆ.
ಬೆಳಗಾವಿ: ವಿಧಾನ ಮಂಡಲದ ಚಳಿಗಾಲ ಅಧಿವೇಶನದ ಮೊದಲ ದಿನದ ಕಾರ್ಯಕಲಾಪದ ನಂತರ ನಮ್ಮ ವರದಿಗಾರನೊಂದಿಗೆ ಮಾತಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಬೆಳಗಾವಿಯ ತಂಟೆಗೆ ಬರದಿರುವಂತೆ ಮಹಾರಾಷ್ಟ್ರದ ಶಾಸಕ ಆದಿತ್ಯ ಠಾಕ್ರೆಗೆ ಎಚ್ಚರಿಕೆ ನೀಡಿದರು. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಹೇಳಿರುವ ಠಾಕ್ರೆಗೆ ಬೆಳಗಾವಿಯ ಬಗ್ಗೆ ಮಾಹಿತಿಯ ಕೊರತೆ ಇದ್ದಂತಿದೆ, ಹಿಂದಿನ ಆಯೋಗಗಳು ಬೆಳಗಾವಿಯ ಬಗ್ಗೆ ಏನು ಹೇಳಿವೆ ಅನ್ನೋದು ಅವರಿಗೆ ಗೊತ್ತಿಲ್ಲ, ವರದಿಗಳನ್ನು ಅವರು ಅಧ್ಯಯನ ಮಾಡಲಿ, ಬಹುಸಂಖ್ಯಾತ ಕನ್ನಡಿಗರು ವಾಸ ಮಾಡುವ ಪ್ರದೇಶ ಬೆಳಗಾವಿ, ಇದನ್ನು ಕರ್ನಾಟಕದಿಂದ ಬೇರ್ಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ತಂಗಡಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Ganga Kalyan: ಗಂಗಾ ಕಲ್ಯಾಣ ಯೋಜನೆ ನೆರವು 3.5 ಲಕ್ಷ ರೂ.ಗೆ ಹೆಚ್ಚಳ; ಸಚಿವ ಶಿವರಾಜ ತಂಗಡಗಿ ಸೂಚನೆ
Published on: Dec 09, 2024 08:05 PM