ಬೃಹತ್ ಗಾತ್ರದ ಹೆಬ್ಬಾವಿನ ಜೊತೆ ಮಲಗಿ ಪುಸ್ತಕ ಓದುತ್ತಿರುವ ವ್ಯಕ್ತಿ!
ವ್ಯಕ್ತಿಯೊಬ್ಬ ದೈತ್ಯ ಗಾತ್ರದ ಹೆಬ್ಬಾವಿನೊಂದಿಗೆ ಮಲಗಿ ಪುಸ್ತಕ ಓದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಕ್ಕದಲ್ಲಿ ಹೆಬ್ಬಾವಿದ್ದರೂ ಆ ವ್ಯಕ್ತಿ ನಿರ್ಭೀತ ಮತ್ತು ಆರಾಮದಾಯಕವಾಗಿ ಕಾಣುತ್ತಿದ್ದ.
ನವದೆಹಲಿ: “ದಿ ರಿಯಲ್ ಟಾರ್ಜನ್” ಎಂದೂ ಕರೆಯಲ್ಪಡುವ ಮೈಕ್ ಹೋಲ್‌ಸ್ಟನ್ ಎಂಬ ಕಂಟೆಂಟ್ ಕ್ರಿಯೇಟರ್ ಬೆಡ್ ರೂಂನ ಹಾಸಿಗೆಯ ಮೇಲೆ ಬೃಹತ್ ಹೆಬ್ಬಾವಿನೊಂದಿಗೆ ಮಲಗಿ ಪುಸ್ತಕ ಓದುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಶಾಕ್ ಮೂಡಿಸಿದೆ. ಹೋಲ್‌ಸ್ಟನ್ ಪುಸ್ತಕವನ್ನು ಓದುತ್ತಿದ್ದಾಗ ಹೆಬ್ಬಾವು ಅವನ ಪಕ್ಕದಲ್ಲಿ ಆರಾಮವಾಗಿ ಮಲಗಿತ್ತು. ಹೋಲ್‌ಸ್ಟನ್ ಅದಕ್ಕೆ ಭಯಪಡಲಿಲ್ಲ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಹಲವರು ಆತಂಕ ಹೊರಹಾಕಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos