ಸಚಿವ ಉಮೇಶ ಕತ್ತಿ ವಿಧಿವಶ: ಹೈದರಾಬಾದ್​ನಿಂದ ಅಗಮಿಸಬೇಕಿದ್ದ ವಿಶೇಷ ವಿಮಾನ ಪ್ರತಿಕೂಲ ಹವಾಮಾನದಿಂದ ವಿಳಂಬ

ಸಚಿವ ಉಮೇಶ ಕತ್ತಿ ವಿಧಿವಶ: ಹೈದರಾಬಾದ್​ನಿಂದ ಅಗಮಿಸಬೇಕಿದ್ದ ವಿಶೇಷ ವಿಮಾನ ಪ್ರತಿಕೂಲ ಹವಾಮಾನದಿಂದ ವಿಳಂಬ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 07, 2022 | 12:48 PM

ಪ್ರತಿಕೂಲ ಹವಾಮಾನದ ಕಾರಣ ವಿಮಾನ ಆಗಮಿಸುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ. ಸಚಿವರ ದೇಹವಿನ್ನೂ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿದೆ.

ಬೆಂಗಳೂರು: ನಿನ್ನೆ ರಾತ್ರಿ ಹೃದಯಾಘಾತಕ್ಕೆ ಬಲಿಯಾದ ಸಚಿವ ಉಮೇಶ್ ಕತ್ತಿಯವರು (Umesh Katti) ಪಾರ್ಥೀವ ಶರೀರ ಇಂದು ಬೆಳಗ್ಗೆ 10 ಗಂಟೆಗೆ ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಗೆ (Bellad Bagewadi) ರವಾನೆಯಾಗಬೇಕಿತ್ತಾದರೂ, ಹೈದರಾಬಾದ್​ನಿಂದ ಬರಬೇಕಿದ್ದ ವಿಶೇಷ ವಿಮಾನ (special aircraft) ಬೆಂಗಳೂರು ತಲುಪುವುದು ತಡವಾಗಿದ್ದರಿಂದ ದೇಹವಿನ್ನೂ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿದೆ. ಪ್ರತಿಕೂಲ ಹವಾಮಾನದ ಕಾರಣ ವಿಮಾನ ಆಗಮಿಸುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ.

Published on: Sep 07, 2022 10:56 AM