AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಜಿನ ಪೋಡಿಯಂ ಗುದ್ದಿ ಪುಡಿ ಮಾಡಿದ ಸಚಿವ ಜಮೀರ್ ಖಾನ್ ಯೇ ಪಠಾಣ್ ಕಾ ಹಾಥ್ ಹೈ ಅಂದರು!

ಗಾಜಿನ ಪೋಡಿಯಂ ಗುದ್ದಿ ಪುಡಿ ಮಾಡಿದ ಸಚಿವ ಜಮೀರ್ ಖಾನ್ ಯೇ ಪಠಾಣ್ ಕಾ ಹಾಥ್ ಹೈ ಅಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 27, 2024 | 6:44 PM

Share

ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಮಾಡಲು ಆಗಮಿಸಿದ್ದ ಜಮೀರ್ ಅವರು ಹಿಂದಿ ಹೈ ಹಮ್ ಹಿಂದೂಸ್ತಾನ್ ಹಮಾರಾ, ದೇಶ ಹಮಾರಾ ಅಂತ ಹೇಳುತ್ತಾ ಅವೇಶಭರಿತರಾಗಿ ಪೋಡಿಯಂ ಅನ್ನು ಜೋರಾಗಿ ಗುದ್ದಿದರು, ಅವರ ಏಟಿನ ರಭಸಕ್ಕೆ ಗಾಜು ಒಡೆದುಹೋಗಿ ಅದರ ಚೂರುಗಳು ಫಳ್ ಅಂತ ನೆಲಕ್ಕೆ ಬಿದ್ದವು. ಅವರ ಸುತ್ತ ನಿಂತಿದ್ದ ಜನ ಸಚಿವರಿಗೆ ಏನಾಯ್ತು ಅತಂಕಕ್ಕೊಳಗಾದರೂ ಜಮೀರ್ ತಮ್ಮ ಭಾಷಣ ನಿಲ್ಲಿಸದೆ ಅದೇ ಆವೇಶದಲ್ಲಿ ಮಾತಾಡಿದರು.

ಬೆಳಗಾವಿ: ಮೊನ್ನೆಯಷ್ಟೇ ಚುನಾವಣಾ ಪ್ರಚಾರದಲ್ಲಿದ್ದಾಗ ಎದೆನೋವಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ (Congress convention) ವೇದಿಕೆಯ ಮೇಲೆ ನಿಂತು ಭಾಷಣ ಮಾಡುವಾಗ, ತಮ್ಮ ಮುಂದಿದ ಗಾಜಿನ ಪೋಡಿಯಂ ಅನ್ನು ಆವೇಶದಲ್ಲಿ ಗುದ್ದಿ ಪುಡಿಗಟ್ಟಿದರು! ಅಂದರೆ ಸಚಿವ ಅರೋಗ್ಯವಾಗಿದ್ದಾರೆ ಅಂತರ್ಥ!! ಓಕೆ ವಿಷಯವೇನೆಂದರೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಮಾಡಲು ಆಗಮಿಸಿದ್ದ ಜಮೀರ್ ಅವರು ಹಿಂದಿ ಹೈ ಹಮ್ ಹಿಂದೂಸ್ತಾನ್ ಹಮಾರಾ, ದೇಶ ಹಮಾರಾ ಅಂತ ಹೇಳುತ್ತಾ ಅವೇಶಭರಿತರಾಗಿ ಪೋಡಿಯಂ ಅನ್ನು ಜೋರಾಗಿ ಗುದ್ದಿದರು, ಅವರ ಏಟಿನ ರಭಸಕ್ಕೆ ಗಾಜು ಒಡೆದುಹೋಗಿ ಅದರ ಚೂರುಗಳು ಫಳ್ ಅಂತ ನೆಲಕ್ಕೆ ಬಿದ್ದವು. ಅವರ ಸುತ್ತ ನಿಂತಿದ್ದ ಜನ ಸಚಿವರಿಗೆ ಏನಾಯ್ತು ಅತಂಕಕ್ಕೊಳಗಾದರೂ ಜಮೀರ್ ತಮ್ಮ ಭಾಷಣ ನಿಲ್ಲಿಸದೆ ಅದೇ ಆವೇಶದಲ್ಲಿ ಮಾತಾಡಿದರು. ಒಬ್ಬ ಕಾರ್ಯಕರ್ತ ಪೋಡಿಯಂ ಮೇಲಿನ ಗಾಜಿನ ತುಂಡು ಸರಿಸಲು ಹೋದಾಗ ಅವನನ್ನು ಗದರಿ, ಜನರತ್ತ ತಿರುಗಿ ‘ಯೇ ಪಠಾಣ್ ಕಾ ಹಾಥ್ ಹೈ’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತಾಡಿದ್ದು ಕನ್ನಡವಲ್ಲ, ಮರಾಠಿ!