ಅಲ್ಪಸಂಖ್ಯಾತ ಸಮುದಾಯಗಳಿಗೆ ಕೆಎಂಡಿಸಿ ವತಿಯಿಂದ ಹಲವಾರು ಯೋಜನೆಗಳನ್ನು ಘೋಷಿಸಿದ ಸಚಿವ ಜಮೀರ್ ಅಹ್ಮದ್ ಖಾನ್

|

Updated on: Aug 22, 2023 | 2:13 PM

ಡ್ರೈವರ್ ನೇ ಮಾಲಿಕ ಸ್ಕೀಮ್ ಅಡಿಯಲ್ಲಿ ನಾಲ್ಕು ಚಕ್ರ ವಾಹನಗಳ ಡ್ರೈವಿಂಗ್ ಲೈಸನ್ಸ್ ಹೊಂದಿರುವ ಅರ್ಹ ವ್ಯಕ್ತಿಗೆ ತನ್ನದೇ ಆದ ವಾಹನ ಹೊಂದಲು ಕೆಎಮ್ ಡಿಸಿಯಿಂದ ರೂ. 8 ಲಕ್ಷ ನೀಡಲಾಗುವುದು, ಇದರಲ್ಲಿ 3 ಲಕ್ಷ ರೂ, ಸಬ್ಸಿಡಿ ಫಲಾನುಭವಿಗೆ ಸಿಗಲಿದೆ ಮತ್ತು ಉಳಿದ 5 ಲಕ್ಷ ರೂ. ಹಣವನ್ನು ಸರ್ಕಾರವೇ ಬ್ಯಾಂಕ್ ಗಳ ಮೂಲಕ ಲೋನ್ ಮಾಡಿಸಿಕೊಡುವುದು ಎಂದು ಜಮೀರ್ ಹೇಳಿದರು

ಬೆಂಗಳೂರು: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಇಂದು ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಅಲ್ಪಂಖ್ಯಾತರ ಕಲ್ಯಾಣ ಯೋಜನೆ (Minority Welfare Scheme) ಅಡಿ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಯೋಜನೆನಗಳ ಬಗ್ಗೆ ವಿವರಣೆ ನೀಡಿದರು. ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ 4 ಯೋಜನೆಗಳನ್ನು ಸಿದ್ದರಾಮಯ್ಯ ಸರ್ಕಾರ ಪುನರಾರಂಭಿಸಿದೆ ಮತ್ತು ನಾಲ್ಕು ಹೊಸ ಸ್ಕೀಮ್ ಗಳನ್ನು ಲಾಂಚ್ ಮಾಡಲಾಗಿದೆ ಎಂದು ಅವರು ಹೇಳಿದರು. ಡ್ರೈವರ್ ನೇ ಮಾಲಿಕ ಸ್ಕೀಮ್ ಅಡಿಯಲ್ಲಿ ನಾಲ್ಕು ಚಕ್ರ ವಾಹನಗಳ ಡ್ರೈವಿಂಗ್ ಲೈಸನ್ಸ್ ಹೊಂದಿರುವ ಅರ್ಹ ವ್ಯಕ್ತಿಗೆ ತನ್ನದೇ ಆದ ವಾಹನ ಹೊಂದಲು ಕೆಎಮ್ ಡಿಸಿಯಿಂದ (KMDC) ರೂ. 8 ಲಕ್ಷ ನೀಡಲಾಗುವುದು, ಇದರಲ್ಲಿ 3 ಲಕ್ಷ ರೂ, ಸಬ್ಸಿಡಿ ಫಲಾನುಭವಿಗೆ ಸಿಗಲಿದೆ ಮತ್ತು ಉಳಿದ 5 ಲಕ್ಷ ರೂ. ಹಣವನ್ನು ಸರ್ಕಾರವೇ ಬ್ಯಾಂಕ್ ಗಳ ಮೂಲಕ ಲೋನ್ ಮಾಡಿಸಿಕೊಡುವುದು ಎಂದು ಜಮೀರ್ ಹೇಳಿದರು. ಹಾಗೆಯೇ, ಉನ್ನತ ವ್ಯಾಸನಗಕ್ಕೆಂದು ವಿದೇಶಗಳಿಗೆ ಹೋಗಬಯಸುವ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ರೂ. 20 ಲಕ್ಷ ಸಾಲವನ್ನು ಕೆಎಂಡಿಸಿ ವತಿಯಿಂದ ನೀಡಲಾಗುವುದು ಎಂದು ಸಚಿವ ಹೇಳಿದರು. ಅದಲ್ಲದೆ, ವಿಚ್ಛೇದಿತ, ಅವಿವಾಹಿತ ಮತ್ತು ಒಂಟಿ ತಾಯಿ ಮಹಿಳೆಯರಿಗೆ ತಮ್ಮ ಸ್ವಂತ ಉದ್ಯೋಗ ಮಾಡಿಕೊಳ್ಳಲು ರೂ. 50,000 ಸಾಲ ನೀಡಲಾಗುವುದು ಮತ್ತು ಇದರಲ್ಲಿ 25,000 ರೂ. ಸಬ್ಸಿಡಿ ರೂಪದಲ್ಲಿ ಲಭ್ಯವಾಗುತ್ತದೆ ಎಂದು ಜಮೀರ್ ಅಹ್ಮದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on