ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಾಗ ಸಭೆ ನಡೆಯಲಿಲ್ಲ, ಹಾಗಾಗಿ ದೆಹಲಿಗೆ ಕರೆದಿದ್ದಾರೆ: ಬಿಜೆಡ್ ಜಮೀರ್ ಅಹ್ಮದ್ ಖಾನ್, ಸಚಿವ
ಲೋಕ ಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಯಲಿದೆಯೇ ಅಂತ ಮಾಧ್ಯಮ ಪ್ರತಿನಿಧಿಗಳು ಕೇಳಿದರೂ, ಗೊತ್ತಿಲ್ಲ ಸ್ವಾಮಿ ಅಂತ ಸಚಿವ ಜಮೀರ್ ಅಹ್ಮದ್ ಹೇಳಿದರು.
ದೆಹಲಿ: ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರನ್ನು ಮತ್ತು ಕೆಲ ಶಾಸಕರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆದಿದೆ. ಎಲ್ಲ ಮಂತ್ರಿಗಳಿಗೆ ದೆಹಲಿಯಿಂದ ಬುಲಾವ್ ಬಂದಿರೋದಷ್ಟೇ ಗೊತ್ತು, ಕರೆ ಹಿಂದಿನ ಕಾರಣವೇನು ಅಂತ ಮಾತ್ರ ಗೊತ್ತಿಲ್ಲ. ವಸತಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಇಂದು ಬೆಳಗ್ಗೆ ದೆಹಲಿಗೆ ಪಯಣಿಸುವ ಮೊದಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಮೊನ್ನೆ ರಾಹುಲ್ ಗಾಂಧಿ (Rahul Gandhi) ಬೆಂಗಳೂರಿಗೆ ಬಂದಾಗಲೇ ಒಂದು ಸಭೆ ನಡೆಯಬೇಕಿತ್ತು, ಕಾರಣಾಂತರಗಳಿಂದ ಅದು ನಡೆಯಲಿಲ್ಲ ಹಾಗಾಗೇ, ದೆಹಲಿಗೆ ಕರೆದಿದ್ದಾರೆ ಎಂದು ಹೇಳಿದರು. ಸಚಿವರು ಮತ್ತು ಶಾಸಕರ ನಡುವೆ ಅಸಮಾಧಾನ ಇದೆಯೇ? ಎಂಥದ್ದೂ ಇಲ್ಲ ಎಂದು ಸಚಿವ ಹೇಳಿದರು. ಲೋಕ ಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಯಲಿದೆಯೇ ಅಂತ ಕೇಳಿದರೆ, ಗೊತ್ತಿಲ್ಲ ಸ್ವಾಮಿ ಅಂತ ಜಮೀರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
