ಕೊಟ್ಟೂರೇಶ್ವರ ರಥೋತ್ಸವ ವೇಳೆ ಪವಾಡ; ಕುಡುಕನನ್ನು ಕೆಳಗೆ ಇಳಿಸಿದ ಬಳಿಕವೇ ಮುಂದೆ ಸಾಗಿದ ರಥ

| Updated By: ಆಯೇಷಾ ಬಾನು

Updated on: Mar 05, 2024 | 3:21 PM

ವಿಜಯನಗರ ಜಿಲ್ಲೆಯ ಕೋಟ್ಟೂರಿನ ಗುರುಬಸವೇಶ್ವರ ರಥೋತ್ಸವದ ವೇಳೆ ಮದ್ಯಪಾನ ಮಾಡಿದ ವ್ಯಕ್ತಿ ರಥದಲ್ಲಿ ಕುಳಿತಿದ್ದ ಈ ಪರಿಣಾಮ ಲಕ್ಷಾಂತರ ಭಕ್ತರು ರಥ ಎಳೆದರೂ ರಥ ಮುಂದೆ ಸಾಗಲಿಲ್ಲ. ರಥದ ಚಕ್ರಗಳು ತಿರುಗಲಿಲ್ಲ. ಮದ್ಯಪಾನ ಮಾಡಿದ ವ್ಯಕ್ತಿಯನ್ನ ಕೆಳಗೆ ಇಳಿಸಿದ ನಂತರ ರಥ ಮುಂದೆ ಸಾಗಿದೆ.

ಕೊಟ್ಟೂರು, ಮಾರ್ಚ್​.05: ಸೋಮವಾರ ಸಂಜೆ 5.25ಕ್ಕೆ ನಡೆದ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ವೇಳೆ ಪವಾಡವೊಂದು ಜರುಗಿದೆ. ಮದ್ಯಪಾನ ಮಾಡಿದ ವ್ಯಕ್ತಿ ತೇರಿನಲ್ಲಿ ಕುಳಿತ ಪರಿಣಾಮ 40 ನಿಮಿಷ ತಡವಾಗಿ ರಥೋತ್ಸವ ನಡೆದಿದೆ. ವಿಜಯನಗರ ಜಿಲ್ಲೆಯ ಕೋಟ್ಟೂರಿನ ಗುರುಬಸವೇಶ್ವರ ರಥೋತ್ಸವದ ವೇಳೆ ಮದ್ಯಪಾನ ಮಾಡಿದ ವ್ಯಕ್ತಿ ರಥದಲ್ಲಿ ಕುಳಿತಿದ್ದ ಈ ಪರಿಣಾಮ ಲಕ್ಷಾಂತರ ಭಕ್ತರು ರಥ ಎಳೆದರೂ ರಥ ಮುಂದೆ ಸಾಗಲಿಲ್ಲ. ರಥದ ಚಕ್ರಗಳು ತಿರುಗಲಿಲ್ಲ. ಮದ್ಯಪಾನ ಮಾಡಿದ ವ್ಯಕ್ತಿಯನ್ನ ಕೆಳಗೆ ಇಳಿಸಿದ ನಂತರ ರಥ ಮುಂದೆ ಸಾಗಿದೆ. ಮದ್ಯಪಾನ ಮಾಡಿದ್ದ ವ್ಯಕ್ತಿ ಕೆಳಗೆ ಇಳಿಯುತ್ತಿದ್ದಂತೆ ರಥ ತಾನಾಗೆ ಐದು ಹೆಜ್ಜೆ ಮುಂದೆ ಸಾಗಿದೆ. ಕೊಟ್ಟೂರೇಶ್ವರನ ಪವಾಡಕ್ಕೆ ಭಕ್ತರು ಜೈ ಕಾರ ಹಾಕಿದ್ದಾರೆ. ಮದ್ಯಪಾನ ಮಾಡಿದ ವ್ಯಕ್ತಿಯನ್ನ ಎಳೆದು ಹಾಕಿದ ವಿಡಿಯೋ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ