ಪಾಕಿಸ್ತಾನ್ ಪರ ಘೋಷಣೆ ತನಿಖೆ ಪೂರ್ಣಗೊಳ್ಳದ ಹೊರತು ನಾಸೀರ್ ಹುಸ್ಸೇನ್ ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಬಾರದು: ಬಿವೈ ವಿಜಯೇಂದ್ರ

ಪಾಕಿಸ್ತಾನ್ ಪರ ಘೋಷಣೆ ತನಿಖೆ ಪೂರ್ಣಗೊಳ್ಳದ ಹೊರತು ನಾಸೀರ್ ಹುಸ್ಸೇನ್ ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಬಾರದು: ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 05, 2024 | 2:09 PM

ಹುಸ್ಸೇನ್ ಅವರ ಬೆಂಬಲಿಗರು ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರವಾಗಿ ಘೋಷಣೆ ಕೂಗಿದ್ದು ಸಾಬೀತಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೇಶಾಭಿಮಾನವಿದ್ದರೆ ಮತ್ತು ಅವರಲ್ಲಿ ರಾಷ್ಟ್ರದ ಸಮಗ್ರತೆ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಹುಸ್ಸೇನ್ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಬೇಕು ಎಂದು ವಿಜಯೇಂದ್ರ ಹೇಳಿದರು.

ಬೆಳಗಾವಿ: ನಗರದಲ್ಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಪಾಕಿಸ್ತಾನದ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದ ಪ್ರಕರಣ ಪೂರ್ಣಗೊಳ್ಳದ ಹೊರತು ರಾಜ್ಯಸಭಾ ಸದಸ್ಯರಾಗಿ (Rajya Sabha Member) ಆಯ್ಕೆಯಾಗಿರುವ ಡಾ ಸಯ್ಯದ್ ನಾಸೀರ್ ಹುಸ್ಸೇನ್ (Dr Syed Naseer Hussain) ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಹೇಳಿದರು. ರಾಜ್ಯಸಭೆಗೆ ಆಯ್ಕೆಯಾಗುವ ಜನಪ್ರತಿನಿಧಿಯು ಸಂವಿಧಾನ ಮತ್ತು ದೇಶದ ಸಾರ್ವಭೌಮತೆಯ ಪ್ರಮಾಣ ವಚನ ಸ್ವೀಕರಿಸುತ್ತಾನೆ, ಆದರೆ ಹುಸ್ಸೇನ್ ಅವರ ಬೆಂಬಲಿಗರು ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರವಾಗಿ ಘೋಷಣೆ ಕೂಗಿದ್ದು ಸಾಬೀತಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೇಶಾಭಿಮಾನವಿದ್ದರೆ ಮತ್ತು ಅವರಲ್ಲಿ ರಾಷ್ಟ್ರದ ಸಮಗ್ರತೆ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಹುಸ್ಸೇನ್ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಬೇಕು ಎಂದು ವಿಜಯೇಂದ್ರ ಹೇಳಿದರು. ಹುಸ್ಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದೆಂದು ತಾವು ಮಾನ್ಯ ಉಪ ರಾಷ್ಟ್ರಪತಿಯವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾಸೀರ್ ಹುಸ್ಸೇನ್​ನಂಥ ದೇಶದ್ರೋಹಿಗಳನ್ನೇ ಕಾಂಗ್ರೆಸ್ ಪರಿಷತ್ ಮತ್ತು ರಾಜ್ಯಸಭೆಗೆ ಆಯ್ಕೆ ಮಾಡುತ್ತದೆ: ಬಸನಗೌಡ ಪಾಟೀಲ್ ಯತ್ನಾಳ್