ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ಗ್ರಾಮಸ್ಥರಿಂದ ಪಿಡಿಓ ಮತ್ತು ಸಿಬ್ಬಂದಿ ತರಾಟೆ
ಕೆಲ ಗ್ರಾಪ ಪಂಚಾಯಿತಿ ಅಧ್ಯಕ್ಷರು ಕಡಿಮೆ ಓದಿದವರು ಇಲ್ಲವೇ ಅವಿದ್ಯಾವಂತರು, ಅಂಥ ಗ್ರಾಮ ಪ್ರಂಚಾಯಿತಿಗಳಲ್ಲಿ ಪಿಡಿಓಗಳು ಭ್ರಷ್ಟಾಚಾರ ನಡೆಸೋದು ಸಾಮಾನ್ಯ. ಇನ್ನೂ ಕೆಲವು ಪಂಚಾಯಿತಿಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮ್ಮತಿ ಮೇರೆಗೆ ಭ್ರಷ್ಟಾಚಾರ ನಡೆಯುತ್ತದೆ, ಅಂದರೆ ಅವರೂ ದುರ್ವ್ಯವಹಾರದಲ್ಲಿ ಭಾಗಿಯಾಗಿರುತ್ತಾರೆ.
ಕೊಡಗು: ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿ ಪಂಚಾಯಿತಿಯನ್ನ ಡೆವಲಪ್ ಮಾಡುವ ತಮ್ಮ ಡೆವಲಪ್ಮೆಂಟ್ ಮೇಲೆ ಹೆಚ್ಚು ಗಮನ ನೀಡುತ್ತಾರೆನ್ನುವುದು ಹೊಸ ಆರೋಪವಲ್ಲ. ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪಿಡಿಒ ಮಂಜುಳಾ ಮತ್ತು ಬಿಲ್ ಕಲೆಕ್ಟರ್ ವಿರುದ್ಧ ಕೂಡಿಗಿ ಗ್ರಾಮದ ನಿವಾಸಿಗಳು ಭ್ರಷ್ಟಾಚಾರದ ಅರೋಪಗಳನ್ನು ಮಾಡಿದರು. ಮಂಜುಳಾ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರೂ ಜನ ಕೇಳುವ ಮೂಡಲ್ಲಿರಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಾವಣಗೆರೆಯಲ್ಲಿ ಲಕ್ಷ ಲಕ್ಷ ಗೋಲ್ ಮಾಲ್; ಪಿಡಿಓ ವಿರುದ್ಧ ಪೊಲೀಸ್ ಠಾಣೆಗೆ ಮೇಲಾಧಿಕಾರಿಯಿಂದ ದೂರು
Latest Videos