
[lazy-load-videos-and-sticky-control id=”ppIrIA8JcKs”]
ಬೆಂಗಳೂರು: ನಗರದ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ವೇಳೆ ಕಿಡಿಗೇಡಿಗಳು ಎಟಿಎಂ ಧ್ವಂಸ ಮಾಡಿದ್ದಾರೆ. ಕಾವಲ್‌ಭೈರಸಂದ್ರದ ಶಾಸಕರ ಅಖಂಡ ಶ್ರೀನಿವಾಸಮೂರ್ತಿ ಮನೆ ಸಮೀಪದ ಓಲ್ಡ್ ಕೆಇಬಿ ರಸ್ತೆಯಲ್ಲಿರುವ HDFC ಬ್ಯಾಂಕ್ ATMನನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಎಟಿಮ್ ಕೇಂದ್ರದ ಗಾಜುಗಳನ್ನು ಪುಡಿ ಪುಡಿ ಮಾಡಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಸಮುದಾಯದ ವಿರುದ್ಧದ ಫೇಸ್ಬುಕ್ ಪೋಸ್ಟ್ನಿಂದ ಭಾರಿ ಅವಾಂತರ ಸಂಭವಿಸಿದೆ. ATM ಅಷ್ಟೇ ಅಲ್ಲದೆ ವಾಹನಗಳಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡಿದ್ದಾರೆ.
Published On - 9:03 am, Wed, 12 August 20