ಅಡಿಕೆ ತೋಟ ನಾಶ ಮಾಡಿದ ದುಷ್ಕರ್ಮಿಗಳು, ವೈಷಮ್ಯಕ್ಕೆ 10 ವರ್ಷದಿಂದ ಪೋಷಣೆ ಮಾಡಿದ ಮರಗಳು ಸರ್ವನಾಶ

Edited By:

Updated on: Jul 30, 2023 | 5:59 PM

ಜಮೀನು ವಿವಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು 350ಕ್ಕೂ ಹೆಚ್ಚು ಅಡಕೆ ಮರಗಳನ್ನು ನಾಶ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ,

ದಾವಣಗೆರೆ, (ಜುಲೈ 30): ಜಮೀನು ವಿವಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು 350ಕ್ಕೂ ಹೆಚ್ಚು ಅಡಕೆ ಮರಗಳನ್ನು ನಾಶ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಕೊಪ್ಪ ಗ್ರಾಮದ ಆನಂದ್ ಎಂಬುವರಿಗೆ ಸೇರಿದ ಅಡಕೆ ತೋಟವನ್ನು ದುಷ್ಕರ್ಮಿಗಳು ನಾಶ ಮಾಡಿದ್ದು, ಜೆಸಿಬಿ ಬಳಸಿ ಸುಮಾರು 10 ವರ್ಷದ ಅಡಕೆ ಮರಗಳನ್ನು ಕತ್ತರಿಸಿದ್ದಾರೆ. ಜೊತೆಗೆ ಕೃತ್ಯವನ್ನು ತಡೆಯಲು ಜಮೀನು ಮಾಲೀಕನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಘಟನೆ ಕುರಿತು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.