ಧಾರವಾಡ ಆಕಾಶವಾಣಿ ವಸತಿ ಸಮುಚ್ಛಯದಲ್ಲಿನ 8 ಮನೆಗಳಿಗೆ ಸುಖಾಸುಮ್ಮನೆ ಬೀಗ ಹಾಕಿದರು ಮತಿಹೀನ ಕಿಡಿಗೇಡಿಗಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 31, 2022 | 7:14 PM

ವಿಷಯವೇನೇ ಇರಲಿ ಮುಚ್ಚಿದ ಮನೆಗಳಿಗೆ ಬೀಗ ಹಾಕುವ ಉದ್ದೇಶ ಏನು ಅನ್ನುವುದು ಅರ್ಥವಾಗಲಾರದು ಮಾರಾಯ್ರೇ. ಬೀಗ ಹಾಕಿದವವನಿಗೆ ಅಥವಾ ಹಾಕಿದವರಿಗೆ ಒಂದು ಮನೆಯಲ್ಲಿ ವಾಸಿಸುವ ಕುಟುಂಬದೊಂದಿಗೆ ವೈರತ್ವವಿದ್ದೀತು. ಅದರೆ ಇಲ್ಲಿ 8 ಮನೆಗಳಿಗೆ ಬೀಗ ಹಾಕಲಾಗಿದೆ!

ಇದು ಶುದ್ಧ ಮತಿಹೀನ ಕೆಲವಲ್ಲದೆ ಬೇರೇನೂ ಅಲ್ಲ. ಇದನ್ನು ಮಾಡಿದವರು ಪ್ರಾಯಶಃ ಧಾರವಾಡದ (Dharwad) ಹುಚ್ಚಾಸ್ಪತ್ರೆಯಿಂದ (Mental Hospital) ತಪ್ಪಿಸಿಕೊಂಡು ಬಂದಿರುತ್ತಾರೆ. ಬುದ್ಧಿ ನೆಟ್ಟಗಿರುವವರು ಖಂಡಿತವಾಗಿಯೂ ಹೀಗೆ ಮತಿಭ್ರಷ್ಟರಂತೆ ವರ್ತಿಸಲಾರರು. ಏನಾಗಿದೆ ಅಂತ ನೀವೇ ನೋಡಿ. ನಿಮಗಿಲ್ಲಿ ಕಾಣುತ್ತಿರೋದು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ (All India Radio) ಕೆಲಸ ಮಾಡುವ ಉದ್ಯೋಗಿಗಳ ವಸತಿ ಸಮುಚ್ಛಯ. ಆಕಾಶವಾಣಿ ಮತ್ತು ವಸತಿಗೃಹಗಳು ಧಾರವಾಡದ ಖ್ಯಾತ ಕರ್ನಾಟಕ ಕಾಲೇಜಿಗೆ (KCD) (ಕೆ ಸಿ ಡಿ) ಹತ್ತಿರದಲ್ಲಿವೆ. ವಸತಿ ನಿಲಯಗಳಲ್ಲಿ ವಾಸ ಮಾಡುವ ಜನ ಹೇಳುವ ಹಾಗೆ ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಕೆಲ ಅವಿವೇಕಿಗಳು, ಇಲ್ಲಿನ 8 ಮನೆಗಳಿಗೆ ಮತ್ತು ಮೇಲಿನ ಮಹಡಿಗಳಿಗೆ ಹೋಗಲು ಇರುವ ಮೆಟ್ಟಿಲುಗಳ ಗೇಟ್ ಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಆ ಸಮಯಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತಂತೆ. ಅದು ತಾನಾಗಿ ನಿಂತು ಹೋಗಿತ್ತೋ ಅಥವಾ ಬೀಗ ಹಾಕಿದವರೇ ಫ್ಯೂಸ್ ಏನಾದರೂ ಕಿತ್ತಿದ್ದರೋ ಅನ್ನೋದು ಪೊಲೀಸರ ತನಿಖೆ ಬಳಿಕ ಬೆಳಕಿಗೆ ಬರಬೇಕು.

ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡವರು ಹಿಂಬಾಗಿಲುಗಳಿಂದ ಆಚೆ ಬಂದಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಬೀಗಗಳನ್ನು ತೆಗೆಯಲಾಗಿದೆ. ಒಬ್ಬ ನಿವಾಸಿ ಪೊಲೀಸರಿಗೆ ವಿಷಯವನ್ನು ವಿವರಿಸುತ್ತಿದ್ದಾರೆ.

ವಿಷಯವೇನೇ ಇರಲಿ ಮುಚ್ಚಿದ ಮನೆಗಳಿಗೆ ಬೀಗ ಹಾಕುವ ಉದ್ದೇಶ ಏನು ಅನ್ನುವುದು ಅರ್ಥವಾಗಲಾರದು ಮಾರಾಯ್ರೇ. ಬೀಗ ಹಾಕಿದವವನಿಗೆ ಅಥವಾ ಹಾಕಿದವರಿಗೆ ಒಂದು ಮನೆಯಲ್ಲಿ ವಾಸಿಸುವ ಕುಟುಂಬದೊಂದಿಗೆ ವೈರತ್ವವಿದ್ದೀತು. ಅದರೆ ಇಲ್ಲಿ 8 ಮನೆಗಳಿಗೆ ಬೀಗ ಹಾಕಲಾಗಿದೆ! ಹಾಗಾಗೇ ನಾವು ಇದನ್ನು ಹುಚ್ಚುತನದ ಪರಾಕಷ್ಠೆ ಅಂತ ಹೇಳುತ್ತಿರೋದು.

ಇದನ್ನೂ ಓದಿ:   Padma awards 2022: ಧಾರವಾಡ ಜಿಲ್ಲೆಯ ಕೂರಿಗೆ ತಜ್ಞನಿಗೆ ಒಲಿದು ಬಂತು ಪದ್ಮಶ್ರೀ ಪುರಸ್ಕಾರ