ಕಾರ್ನಿಕ ಗುಳಿಗ ದೈವದ ಮೊರೆಹೊಕ್ಕ ಕೆಲವೇ ಗಂಟೆಗಳ ಬಳಿಕ ಶಾರದಾ ಮಹೋತ್ಸವದ ಬ್ಯಾನರ್ ಹರಿದ ಕಿಡಿಗೇಡಿಗಳ ಬಂಧನ!
ಪೊಲೀಸರ ನಿಷ್ಕ್ರಿಯತೆಯಿಂದ ಬೇಸತ್ತ ಭಕ್ತರು ಕಾರ್ನಿಕ ದೈವದ ಮೊರೆಹೊಕ್ಕಿದ್ದಾರೆ. ಸೋಜಿಗದ ಸಂಗತಿಯೆಂದರೆ ದೈವಕ್ಕೆ ಮೊರೆಯಿಟ್ಟ ಕೆಲವೇ ಗಂಟೆಗಳ ನಂತರ ಕಿಡಿಗೇಡಿಗಳ ಬಂಧನವಾಗಿದೆ.
ಮಂಗಳೂರು: ನಗರದಲ್ಲಿ ನಡೆದ ಶಾರದಾ ಪೂಜಾ ಮಹೋತ್ಸವದ (Sharada Mahotsav) ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ಉತ್ಸವಕ್ಕೆ ಸಂಬಂಧಿಸಿದ ಬ್ಯಾನರ್ ಗಳನ್ನು (banner) ಹರಿದು ಹಾಕಿದ್ದಾರೆ. ಶಾರದಾ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ಪೊಲೀಸರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬ್ಯಾನರ್ ಹರಿಯುವ ಕುಕೃತ್ಯ ಈದ್-ಮಿಲಾದ್ (Eid-Milad) ಮುಂಚಿನ ದಿನ ನಡೆದಿದೆ ಎಂದು ಭಕ್ತರೊಬ್ಬರು ಹೇಳುತ್ತಿದ್ದಾರೆ. ಪೊಲೀಸರ ನಿಷ್ಕ್ರಿಯತೆಯಿಂದ ಬೇಸತ್ತ ಭಕ್ತರು ಕಾರ್ನಿಕ ಗುಳಿಗ ದೈವದ ಮೊರೆಹೊಕ್ಕಿದ್ದಾರೆ. ಸೋಜಿಗದ ಸಂಗತಿಯೆಂದರೆ ದೈವಕ್ಕೆ ಮೊರೆಯಿಟ್ಟ ಕೆಲವೇ ಗಂಟೆಗಳ ನಂತರ ಕಿಡಿಗೇಡಿಗಳ ಬಂಧನವಾಗಿದೆ.