ವಿಜಯಪುರ ತಲುಪಿದ ಬಿಜೆಪಿ ಜನಸಂಕಲ್ಪ ಯಾತ್ರೆ; ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಗಣ್ಯರು
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಗೋವಿಂದ ಕಾರಜೋಳ ಕಮಲಾಪುರದಲ್ಲಿರುವ ದಲಿತರ ಮನೆಗೆ ಭೇಟಿ ಎಲ್ಲಮ್ಮ ಎನ್ನುವವರ ಮನೆಯಲ್ಲಿ ಬೆಳಗಿನ ತಿಂಡಿ ಸೇವಿಸಿದರು.
ವಿಜಯಪುರ: ರಾಜ್ಯದಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ (Janasankalpa Yatre) ಮುಂದುವರಿದಿದೆ. ನಿನ್ನೆ (ಮಂಗಳವಾರ) ರಾಯಚೂರಲ್ಲಿದ್ದ ಬಿಜೆಪಿ ನಾಯಕರು ಇಂದು ವಿಜಯಪುರ ತಲುಪಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಮತ್ತು ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಯ ಕಮಲಾಪುರದಲ್ಲಿರುವ ದಲಿತರ ಮನೆಗೆ ಭೇಟಿ ಎಲ್ಲಮ್ಮ ಎನ್ನುವವರ ಮನೆಯಲ್ಲಿ ಬೆಳಗಿನ ತಿಂಡಿ ಸೇವಿಸಿದರು. ತಿಂಡಿಯ ರೂಪದಲ್ಲಿ ಗಣ್ಯರಿಗೆ ಈ ಭಾಗದ ಜನಪ್ರಿಯ ತಿಂಡಿಯಾಗಿರುವ ವಗ್ರಾಣಿ (ಸುಸಲಾ ಅಂತಲೂ ಕರೆಸಿಕೊಳ್ಳುವ ಹಸಿ ಮಂಡಕ್ಕಿಯಲ್ಲಿ ಮಾಡುವ ಸ್ವಾದಿಷ್ಟ ತಿಂಡಿ) ಮತ್ತು ಮಿರ್ಚಿ ಭಜ್ಜಿ ನೀಡಲಾಯಿತು.
Published on: Oct 12, 2022 12:10 PM
Latest Videos