ಕಾಣೆಯಾಗಿದ್ದ ಮೇಲುಕೋಟೆಯ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾಳ ಶವ ಪತ್ತೆ, ಕೊಲೆ ಶಂಕೆ ವ್ಯಕ್ತಪಡಿಸಿದ ಪೊಲೀಸ್

|

Updated on: Jan 23, 2024 | 11:02 AM

ಸೋಮವಾರ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯ ಮೃತದೇಹ ಪತ್ತೆಯಾಗಿದೆ. ದೀಪಿಕಾ ಕೊಲೆಯಾಗಿರಬಹುದಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ತಾಲ್ಲೂಲು ಆಸ್ಪತ್ರೆಗೆ ಕಳಿಸಲಾಗಿದೆ. ಶವಪರೀಕ್ಷೆಯ ನಂತರವೇ ದೀಪಿಕಾ ಸಾವಿನ ನಿಖರ ಕಾರಣ ಗೊತ್ತಾಲಿದೆ.

ಮಂಡ್ಯ: ಜನವರಿ 20 ಕಾಣೆಯಾಗಿದ್ದ ಜಿಲ್ಲೆಯ ಪಾಂಡವಪುರ ಮಾಣಿಕ್ಯಹಳ್ಳಿಯ ಶಿಕ್ಷಕಿಯೊಬ್ಬರು (teacher) ಶವವಾಗಿ ಪತ್ತೆಯಾಗಿದ್ದಾರೆ. 28-ವರ್ಷ ವಯಸ್ಸಿನ ದೀಪಿಕಾ (Deepika) ಅವರ ದೇಹ ಮೇಲುಕೋಟೆಯ (Melukote) ಬೆಟ್ಟದ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ವಿವಾಹಿತೆಯಾಗಿದ್ದ ದೀಪಿಕಾಗೆ 8-ವರ್ಷ ವಯಸ್ಸಿನ ಮಗ ಇದ್ದಾನೆ. ಕುಟುಂಬದ ಮೂಲಗಳ ಪ್ರಕಾರ ಮೃತ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರದಂದು ಶಾಲೆಗೆ ಹೋಗಿದ್ದ ದೀಪಿಕಾ ಸಂಜೆಯಾದರೂ ಮನೆನಗೆ ಬಾರದೇ ಹೋದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು ಮತ್ತು ಮೇಲಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯ ಮೃತದೇಹ ಪತ್ತೆಯಾಗಿದೆ. ದೀಪಿಕಾ ಕೊಲೆಯಾಗಿರಬಹುದಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ತಾಲ್ಲೂಲು ಆಸ್ಪತ್ರೆಗೆ ಕಳಿಸಲಾಗಿದೆ. ಶವಪರೀಕ್ಷೆಯ ನಂತರವೇ ದೀಪಿಕಾ ಸಾವಿನ ನಿಖರ ಕಾರಣ ಗೊತ್ತಾಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ