ವಿಧಾನಸೌಧದ ಬಳಿ ಮಹಾಂತೇಶ್ ಕೌಜಲಗಿ ಕಾರು ಅಪಘಾತ, ಸಣ್ಣಪುಟ್ಟ ಗಾಯಗಳೊಂದಿಗೆ ಶಾಸಕ ಪಾರು

|

Updated on: May 20, 2024 | 1:19 PM

ಶಾಸಕ ತಮ್ಮ ಕಾರಲ್ಲಿ ಶಾಸಕರ ಭವನದಿಂದ ಬರುವಾಗ ವೇಗವಾಗಿ ಚಲಿಸುತ್ತಿದ್ದ ಕೆಂಪು ಕಾರೊಂದು ಅವರ ಕಾರಿನ ಬಲಬದಿಯ ಹಿಂಭಾಗಕ್ಕೆ ಗುದ್ದಿದೆ. ಮಹಾಂತೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ಕಾರುಗಳು ಜಖಂಗೊಂಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕೆಂಪು ಕಾರಿನ ಚಾಲಕನನ್ನು ವಶಕ್ಕೆ ಪಡೆದಿರುವ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ವಿಧಾನ ಸೌಧ ಸುತ್ತಮುತ್ತಲಿನ ಪ್ರದೇಶ ಌಕ್ಸಿಡೆಂಟ್ ಪ್ರೋನ್ ಜೋನ್ (accident prone zone) ಏನೂ ಅಲ್ಲ, ಅದು ಸೂಕ್ಷ್ಮ ಪ್ರದೇಶವಾಗಿರುವುದರ ಜೊತೆಗೆ ಮುಂಭಾಗದಲ್ಲೇ ರಾಜ್ಯದ ಉಚ್ಚ ನಾಯಲಯ ಇರುವುದದರಿಂದ ಸದಾ ಪೊಲೀಸ್ ಪಡೆ ಕರ್ತವ್ಯನಿರತವಾಗಿರುತ್ತದೆ. ಇದೇ ಕಾರಣಕ್ಕೆ ಪ್ರದೇಶದಲ್ಲಿ ಅಪಘಾತಗಳು ಸಂಭವಿಸುವುದು ಬಹಳ ಕಡಿಮೆ. ಆದರೆ ಇವತ್ತು ಬೆಳಗಿನ ಸಮಯ ಬೈಲಹೊಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಿಗೆ (Mahantesh Koujalgi) ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಶಾಸಕ ತಮ್ಮ ಕಾರಲ್ಲಿ ಶಾಸಕರ ಭವನದಿಂದ (Legislators House) ಬರುವಾಗ ವೇಗವಾಗಿ ಚಲಿಸುತ್ತಿದ್ದ ಕೆಂಪು ಕಾರೊಂದು ಅವರ ಕಾರಿನ ಬಲಬದಿಯ ಹಿಂಭಾಗಕ್ಕೆ ಗುದ್ದಿದೆ. ಮಹಾಂತೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ಕಾರುಗಳು ಜಖಂಗೊಂಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕೆಂಪು ಕಾರಿನ ಚಾಲಕನನ್ನು ವಶಕ್ಕೆ ಪಡೆದಿರುವ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಯಡವಟ್ಟು, ಬೆಂಗಳೂರು-ಮೈಸೂರು ಹೆದ್ದಾರಿ ಸರ್ವಿಸ್ ರಸ್ತೆಗಳಲ್ಲಿನ ಅಪಘಾತಗಳು ಹೆಚ್ಚಳ