Pradeep Eshwar: ವಿಧಾನಸೌಧ ಆವರಣದಲ್ಲಿ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸುತ್ತಿದ ಪ್ರದೀಪ್ ಈಶ್ವರ್
ಪ್ರದೀಪ್ ಹೊರತು ಪಡಿಸಿ ಶಿವಕುಮಾರ್ ಜೊತೆಗಿದ್ದವರೆಲ್ಲ ಹಣ್ಣು ತಿನ್ನುತ್ತಾರೆ. ಶಿವಕುಮಾರ್ ಅಲ್ಲಿಂದ ಹೊರಟಾಗಲೂ ಪ್ರದೀಪ್ ಹಿಂಬಾಲಿಸುತ್ತಾರೆ.
ಬೆಂಗಳೂರು: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೋದೆಡೆಯೆಲ್ಲ ಸದ್ದು ಮಾಡುತ್ತಿದ್ದಾರೆ. ಅವರು ಹೆಚ್ ಎ ಎಲ್ ಏರ್ಫೋಟ್ ಗೆ ಹೋದರೂ ಮಾಧ್ಯಮ ಕೆಮೆರಾಗಳ ಕಣ್ಮಣಿಯಾಗುತ್ತಾರೆ, ವಿಧಾನ ಸೌಧಕ್ಕೆ ಬಂದಾಗಲೂ ಅದೇ ಸ್ಥಿತಿ. ಇಂದು 16ನೇ ವಿಧಾನ ಸಭೆಯ ಅಧಿವೇಶನ ಆರಂಭವಾಗಿದೆ. ಶಾಸಕರೆಲ್ಲ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬ್ರೇಕ್ ನಲ್ಲಿ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೆಲ ಸದಸ್ಯರೊಂದಿಗೆ ಹೊರಬಂದಾಗ ಅವರ ಜೊತೆ ಪ್ರದೀಪ್ ಕೂಡ ಇದ್ದರು. ವಿಧಾನಸೌಧದ ಆವರಣದಲ್ಲಿರುವ ಹಾಪ್ ಕಾಮ್ಸ್ ಅಂಗಡಿಲ್ಲಿ ಶಿವಕುಮಾರ್ ಏಲಕ್ಕಿ ಬಾಳೆಹಣ್ಣು (yalakki banana) ತಿಂದು ಜ್ಯೂಸ್ ಕುಡಿಯುತ್ತಾರೆ. ಪ್ರದೀಪ್ ಹೊರತು ಪಡಿಸಿ ಶಿವಕುಮಾರ್ ಜೊತೆಗಿದ್ದವರೆಲ್ಲ ಹಣ್ಣು ತಿನ್ನುತ್ತಾರೆ. ಶಿವಕುಮಾರ್ ಅಲ್ಲಿಂದ ಹೊರಟಾಗಲೂ ಪ್ರದೀಪ್ ಹಿಂಬಾಲಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?

