ಸರ್ಕಾರಿ ಶಾಲೆ ಮಕ್ಕಳನ್ನ ಹೆಲಿಕಾಪ್ಟರ್ನಲ್ಲಿ ಕರೆದೊಯ್ದ MLA ಸತೀಶ್ ಸೈಲ್ ಪುತ್ರಿ
ಕರಾವಳಿ ಉತ್ಸವದ ಅಂಗವಾಗಿ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಚಿ ಸೈಲ್ ಮಕ್ಕಳು, ವಿಶೇಷ ಚೇತನರು ಹಾಗೂ ಪೌರಕಾರ್ಮಿಕರಿಗೆ ಉಚಿತ ಹೆಲಿಕಾಪ್ಟರ್ ಸವಾರಿ ಆಯೋಜಿಸಿದ್ದಾರೆ. ಸುಮಾರು 7 ನಿಮಿಷಗಳ ಈ ರೈಡ್‌ನಲ್ಲಿ ಕಡಲತೀರ, ಕಾಳಿ ಸಂಗಮ ಮತ್ತು ಕಾರವಾರ ನಗರದ ವೈಮಾನಿಕ ನೋಟವನ್ನು ಸವಿಯುವ ಅವಕಾಶ ಕಲ್ಪಿಸಲಾಗಿದೆ.
ಕಾರವಾರ, ಡಿಸೆಂಬರ್ 24: ಕರಾವಳಿ ಉತ್ಸವದ ಪ್ರಯುಕ್ತ ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಹೆಲಿಕ್ಯಾಪ್ಟರ್ ರೈಡ್ ಆಯೋಜನೆ ಮಾಡಲಾಗಿದ್ದು, ವಿಶೇಷ ಚೇತನ ಮಕ್ಕಳು ಇದಕ್ಕೆ ಚಾಲನೆ ನೀಡಿದ್ದಾರೆ. ವಿಶೇಷ ಚೇತನ ಮಕ್ಕಳು ಮತ್ತು ಕಾರವಾರ -ಅಂಕೋಲಾ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದ್ದು, ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಶಾಸಕ ಸತೀಶ್ ಸೈಲ್ ಪುತ್ರಿ ಸಾಚಿ ಇದರ ಜವಾಬ್ದಾರಿ ಹೊತ್ತಿದ್ದಾರೆ. ಅರಬ್ಬೀ ಸಮುದ್ರದ ಕಡಲ ತೀರ, ಕಾಳಿ ಸಂಗಮ ಹಾಗೂ ಕಾರವಾರ ನಗರವನ್ನು ಆಗಸದಿಂದ ವೀಕ್ಷಿಸಬಹುದಾದ ಸುಮಾರು 7 ನಿಮಿಷಗಳ ಹೆಲಿಕ್ಯಾಪ್ಟರ್ ರೈಡ್ಗೆ ಸಾರ್ವಜನಿಕರಿಗೆ 3,900 ರೂ. ದರ ನಿಗದಿ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
