ಭಾರತ ಜೋಡೋ ಯಾತ್ರೆಯ ಸಮಾವೇಶ ಸ್ಥಳನ್ನು ಸ್ವಚ್ಛಗೊಳಿಸಿದ ರೆಡ್ಡಿ, ರಾಮುಲು
ಬಳ್ಳಾರಿಯಲ್ಲಿ ಐರನಲೆಗ್ ಬಂದು ಹೋಗಿದೆ ಹೀಗಾಗಿ ಕ್ಲೀನ್ ಮಾಡುತ್ತಿದ್ದೇನೆ ಪರೋಕ್ಷವಾಗಿ ರಾಹುಲ್ ಗಾಂಧಿಗೆ ಶಾಸಕ ಸೋಮಶೇಖರ್ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿ: ಬಳ್ಳಾರಿಯಲ್ಲಿ ಐರನಲೆಗ್ ಬಂದು ಹೋಗಿದೆ ಹೀಗಾಗಿ ಕ್ಲೀನ್ ಮಾಡುತ್ತಿದ್ದೇನೆ. ಹಿಂದೆ ಮಹಿಷಾಸುರದಲ್ಲಿಯೂ ಐರನ್ ಲೆಗ್ ಬಂದಿತ್ತು, ಆಗ ಪೂಜೆ ಮಾಡಿಸಿದ್ದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಬಳ್ಳಾರಿಯಲ್ಲಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಯ ಸಮಾವೇಶ ನಡೆದಿತ್ತು. ಸಮಾವೇಶ ನಡೆದ ಸ್ಥಳದಲ್ಲಿ ಇಂದು (ಅ. 16) ಸಚಿವ ಬಿ. ಶ್ರೀರಾಮುಲು ಮತ್ತು ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಈ ಸಮಯದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಮಾಧ್ಯಮದವರೊಂದಿಗೆ ಮಾತನಾಡಿ ಬಳ್ಳಾರಿಯಲ್ಲಿ ಐರನಲೆಗ್ ಬಂದು ಹೋಗಿದೆ ಹೀಗಾಗಿ ಕ್ಲೀನ್ ಮಾಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
Published on: Oct 16, 2022 05:48 PM
