ರಾತ್ರಿಯಿಡೀ ರವಿಯೊಂದಿಗಿದ್ದ ಎಮ್ಮೆಲ್ಸಿ ಕೇಶವ ಪ್ರಸಾದ್ ಘಟನಾವಳಿಯನ್ನು ಟಿವಿ9 ಗೆ ವಿವರಿಸಿದರು
ರಾತ್ರಿಯೆಲ್ಲ ರವಿಯವರೊಂದಿಗೆ ಕಾರಲ್ಲಿದ್ದ ಕೇಶವ ಪ್ರಸಾದ್ ತಾನು ಮತ್ತು ರವಿ ತಮ್ಮನ್ನು ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಪೊಲೀಸರಿಗೆ ಹೇಳಿದ್ದು ನಿಜವೆಂದರು. ತಮ್ಮನ್ನು ವಿನಾಕಾರಣ ಊರೂರು ಸುತ್ತಿಸುವ ಬದಲು ತಮ್ಮಿಂದ ದೇಶದ ಐಕ್ಯತೆಗೆ ಧಕ್ಕೆ ಇದೆ, ಸಮಾಜಕ್ಕೆ ಅಪಾಯವಿದೆ ಅಂತ ಪೊಲೀಸರಿಗೆ ಅನಿಸುತ್ತಿದ್ದರೆ ಶೂಟ್ ಮಾಡಿ ಕೊಂದು ಬಿಡಲಿ ಅಂತ ರಸ್ತೆಯಲ್ಲಿ ಕೂತು ಹೇಳಿದ್ದು ಸತ್ಯ ಎಂದು ಪ್ರಸಾದ್ ಹೇಳಿದರು.
ಬೆಳಗಾವಿ: ನಿನ್ನೆ ಸಿಟಿ ರವಿಯವರನ್ನು ನಗರದ ಪೊಲೀಸರು ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದಾಗ ಪಕ್ಷದ ಮತ್ತೊಬ್ಬ ಎಂಎಲ್ಸಿ ಕೇಶವ ಪ್ರಸಾದ್ ಅವರೊಂದಿಗಿದ್ದರು. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು ಎಲ್ಲವನ್ನು ಸವಿಸ್ತಾರವಾಗಿ ಹೇಳಿದ್ದಾರೆ. ಪರಿಷತ್ ನಲ್ಲಿ ಸಭಾಪತಿ ಅವರು ರೂಲಿಂಗ್ ನೀಡಿದ ಬಳಿಕ ಕಾಂಗ್ರೆಸ್ನವರು ವಿಷಯವನ್ನು ಅಲ್ಲಿಗೆ ನಿಲ್ಲಿಸಬೇಕಿತ್ತು. ಅದರೆ ಉಪ ಮುಖ್ಯಮಂತ್ರಿ ಮತ್ತು ಉಳಿದ ಕಾಂಗ್ರೆಸ್ ಎಂಎಲ್ಸಿಗಳು ತಮ್ಮೆಲ್ಲರನ್ನು ಮತ್ತು ನಿರ್ದಿಷ್ಟವಾಗಿ ಸಿಟಿ ರವಿಯವರನ್ನು ಅರೆಸ್ಟ್ ಮಾಡಿಸುವ ನಿರ್ಧಾರ ಮಾಡಿಕೊಂಡಂತಿತ್ತು. ಬಿಜೆಪಿ ಎಂಎಲ್ಸಿಗಳು ಸಭಾಪತಿಗಳಿಗೆ ದೂರನ್ನು ಸಲ್ಲಿಸಿ ಒಂದು ಚಿಕ್ಕ ಪ್ರತಿಭಟನೆ ನಡೆಸಿದ ಬಳಿಕ ಸಭಾತಿಯವರ ಅನುಮತಿ ಕೋರದೆ ರವಿಯವರನ್ನು ಬಂಧಿಸಲಾಯಿತು ಎಂದು ಕೇಶವ್ ಪ್ರಸಾದ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ: ಸಿಟಿ ರವಿ ಪ್ರಕರಣ ಉಲ್ಲೇಖಿಸಿ ಕುಮಾರಸ್ವಾಮಿ ಪ್ರಶ್ನೆ