Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಮೇಲೆ ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ ಬಿಪಿ ಹರೀಶ್ ಗೆ ಶೋಭೆ ನೀಡಲ್ಲ

ರಸ್ತೆಮೇಲೆ ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ ಬಿಪಿ ಹರೀಶ್ ಗೆ ಶೋಭೆ ನೀಡಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 11, 2023 | 11:45 AM

ಇಂಜಿನೀಯರ್ ನಿಂದ ಪ್ರಮಾದ ಜರುಗಿದ್ದರೂ ಒಬ್ಬ ಸರಕಾರೀ ಅಧಿಕಾರಿಯನ್ನು ಸಾರ್ವಕನಿಕವಾಗಿ ಅಗಲೀ ಅಥವಾ ಖಾಸಗಿ ಪ್ರದೇಶದಲ್ಲಾಗಲಿ ಬಯ್ಯುವ ಅಧಿಕಾರ ಶಾಸಕ ಬಿಪಿ ಹರೀಶ್ ಗೆ ಇಲ್ಲ. ಅವರು ಯಾವ ಉದ್ದೇಶದಿಂದ ಅಧಿಕಾರಿಯ ಮೇಲೆ ಹಾಗೆ ರೇಗಾಡಿದ್ದರೋ ಸ್ಪಷ್ಟವಾಗುತ್ತಿಲ್ಲ. ತಮಗೆ ಬೇಡದ ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಿಸಲು ಶಾಸಕರು ಮತ್ತು ಸಂಸದರು ಇಂಥ ತಂತ್ರಗಳನ್ನು ಬಳಸೋದುಂಟು.

ದಾವಣಗೆರೆ: ಶಾಸಕರು ಅಥವಾ ಯಾವುದೇ ಜನ ಪ್ರತಿನಿಧಿ ಫಾರ್ ದೆಟ್ ಮ್ಯಾಟರ್, ಸರ್ಕಾರೀ ಅಧಿಕಾರಿಗಳನ್ನು ತಮ್ಮ ಮನೆಯಾಳು, ಅವರಿಗೆ ಸಿಕ್ಕುವ ಅಂಬಲಿ (food) ತಮ್ಮ ಮನೆಯಿಂದ ಹೋಗುತ್ತದೆ ಅಂತ ಭಾವಿಸುತ್ತಾರೆಯೇ? ಹರಿಹರದ ಬಿಜೆಪಿ ಶಾಸಕ ಬಿಪಿ ಹರೀಶ್ (BP Harish) ವರ್ತನೆ ನೋಡಿದರೆ ಹಾಗನ್ನಿಸದಿರದು. ಹರಿಹರ ಪಟ್ಟಣದ ತುಂಗಭದ್ರ ಸೇತುವೆಯಿಂದ ಗಾಂಧಿ ಮೈದಾನದವರೆಗೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ (PWD Engineer) ಒಬ್ಬರನ್ನು ಸಾರ್ವಜನಿಕವಾಗಿ ಮನಬಂದಂತೆ ನಿಂದಿಸುತ್ತಿದ್ದಾರೆ ಮತ್ತು ಅವಾಚ್ಯ ಪದಗಳನ್ನು ತಮ್ಮ ಬೈಗುಳದಲ್ಲಿ ಪುಂಖಾನುಪುಂಖವಾಗಿ ಬಳಸುತ್ತಿದ್ದಾರೆ. ಶಾಸಕನ ಜೊತೆ ಹದಿನೃದಿಪ್ಪತ್ತು ಬೆಂಬಲಿಗರಿದ್ದು ಅವರುಸ ಸಹ ಸರ್ಕಾರಿ ಅಧಿಕಾರಿಯನ್ನು ಅಕ್ಷರಶಃ ಹೆಕ್ಲ್ ಮಾಡುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ದರ್ಗಾವೊಂದಿದ್ದು ಅದನ್ನೇ ಗುರಿಯಾಗಿಸಿಕೊಂಡು ಶಾಸಕ ಮತ್ತವರ ಚೇಲಾಗಳು ಅಧಿಕಾರಿಯ ಮೇಲೆ ಮುಗಿಬಿದ್ದಿದ್ದಾರೆ ಅಂತ ಹೇಳಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ