ಮನರೇಗಾ ಯೋಜನೆ ಹೆಸರು ಬದಲಾವಣೆ: ಕೇಂದ್ರದ ಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

Edited By:

Updated on: Dec 21, 2025 | 1:43 PM

ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮನರೇಗಾ ಯೋಜನೆ ಹೆಸರು ಬದಲಾವಣೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಮಹಾತ್ಮ ಗಾಂಧಿ ಹೆಸರನ್ನು ತೆಗೆದು ಜಿ-ರಾಮ್​ ಜಿ ಬಿಲ್ ತಂದಿರುವುದು ದೇಶದ ಬಡ ಜನರಿಗೆ ತೊಂದರೆ ನೀಡಿದೆ. ಕಾರ್ಮಿಕರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ.

ಕಲಬುರಗಿ, ಡಿಸೆಂಬರ್​ 21: ಮನರೇಗಾ ವಿಧೇಯಕ​ ಬಗ್ಗೆ ಇನ್ನೂ ಸಾಕಷ್ಟು ಚರ್ಚೆ ಮಾಡಬೇಕಿತ್ತು. ಮನರೇಗಾ ಯೋಜನೆ ತೆಗೆದು ಜಿ-ರಾಮ್​ ಜಿ ಬಿಲ್​ನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದಾರೆ. ಇದರಿಂದ ದೇಶದ ಬಡ ಜನರಿಗೆ ತೊಂದರೆಯಾಗುತ್ತಿದೆ ಎಂದು ಕೇಂದ್ರದ ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಜನೆಯಲ್ಲಿ ಗಾಂಧಿ ಹೆಸರು ಇದ್ದಿದ್ದರೆ ಏನು ತೊಂದರೆ ಆಗ್ತಿತ್ತು. ಜಿ ರಾಮ್ ಜಿ ಹೆಸರು ಇಟ್ಟು ಏನು ಸಾಧನೆ ಮಾಡಿದ್ದೀರಿ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.