ಔಟಾದ ಕೋಪದಲ್ಲಿ ಬ್ಯಾಟ್ ಮುರಿದು ಹಾಕಿದ ಪಾಕ್ ಕ್ರಿಕೆಟಿಗ; ವಿಡಿಯೋ ನೋಡಿ
Mohammad Harris' Bat Breaks: ಪಾಕಿಸ್ತಾನದ ಯುವ ಆಟಗಾರ ಮೊಹಮ್ಮದ್ ಹ್ಯಾರಿಸ್ ತನ್ನ ಕಳಪೆ ಪ್ರದರ್ಶನದಿಂದಾಗಿ ತನ್ನ ಬ್ಯಾಟ್ ಅನ್ನು ಮುರಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುಎಇ ವಿರುದ್ಧದ ಟಿ20 ಪಂದ್ಯದಲ್ಲಿ ಔಟ್ ಆದ ನಂತರ ಹತಾಶನಾಗಿ ಬ್ಯಾಟ್ ಮುರಿದಿದ್ದಾರೆ. ಕಳೆದ 8 ಇನ್ನಿಂಗ್ಸ್‌ಗಳಲ್ಲಿ ಹ್ಯಾರಿಸ್ ಕಳಪೆ ಪ್ರದರ್ಶನ ನೀಡಿದ್ದಾರೆ.
2025 ರ ಏಷ್ಯಾಕಪ್ಗೂ ಮೊದಲು ಪಾಕಿಸ್ತಾನ ತಂಡ ಯುಎಇಯಲ್ಲಿ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ 2ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿತ್ತಾದರೂ, ತಂಡದ ಯುವ ಆಟಗಾರ ಮೊಹಮ್ಮದ್ ಹ್ಯಾರಿಸ್ ಔಟಾದ ಹತಾಶೆಯಲ್ಲಿ ತಮ್ಮ ಬ್ಯಾಟ್ ಅನ್ನು ಮುರಿದು ಹಾಕಿದ್ದಾರೆ. ವಾಸ್ತವವಾಗಿ ಈ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 13 ಎಸೆತಗಳಲ್ಲಿ ಕೇವಲ 15 ರನ್ ಬಾರಿಸಿದ್ದ ಹ್ಯಾರಿಸ್, ಯುಎಇಯಂತಹ ದುರ್ಬಲ ತಂಡದ ವಿರುದ್ಧವೂ 2 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಆಗಸ್ಟ್ 30 ರ ಶನಿವಾರ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ, ಯುಎಇಯ ವೇಗಿ ಜುನೈದ್ ಸಿದ್ದಿಕಿ ಹ್ಯಾರಿಸ್ ಅವರನ್ನು ಕ್ಷಣಾರ್ಧದಲ್ಲಿ ಔಟ್ ಮಾಡಿದರು. ಹ್ಯಾರಿಸ್ ಥರ್ಡ್ ಮ್ಯಾನ್ ಕಡೆಗೆ ಶಾಟ್ ಹೊಡೆದರು ಮತ್ತು 6 ರನ್ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಫೀಲ್ಡರ್ ಬೌಂಡರಿಯಲ್ಲಿ ಸುಲಭವಾದ ಕ್ಯಾಚ್ ಪಡೆದರು. ಇದರಿಂದ ಹತಾಶರಾದ ಹ್ಯಾರಿಸ್ ತನ್ನ ಬ್ಯಾಟ್ ಅನ್ನು ಜೋರಾಗಿ ನೆಲಕ್ಕೆ ಹೊಡೆದರು. ಇದರಿಂದಾಗಿ ಬ್ಯಾಟ್ ಮತ್ತು ಅದರ ಹ್ಯಾಂಡಲ್ ಬೇರ್ಪಟ್ಟವು. ಪಾಕಿಸ್ತಾನಿ ಬ್ಯಾಟ್ಸ್‌ಮನ್‌ನ ಈ ನಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರನ್ನು ಬಹಳಷ್ಟು ನಿಂದಿಸಲಾಗುತ್ತಿದೆ. ವಾಸ್ತವವಾಗಿ, ಹ್ಯಾರಿಸ್ ಕಳೆದ 8 ಸತತ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದು, ಆಡಿರುವ 42 ಎಸೆತಗಳಲ್ಲಿ ಕೇವಲ 37 ರನ್ ಮಾತ್ರ ಕಲೆಹಾಕಿದ್ದಾರೆ.
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು

