ಹಿಂದಿನ ರಾತ್ರಿ ರಕ್ತ ವಾಂತಿ ಮಾಡಿಕೊಂಡಿದ್ದ ಮೋಹನ್​ ಜುನೇಜ; ಸ್ನೇಹಿತನ ಬಗ್ಗೆ ಡಿಂಗ್ರಿ ನಾಗರಾಜ್​ ಭಾವುಕ ನುಡಿ

| Updated By: ಮದನ್​ ಕುಮಾರ್​

Updated on: May 07, 2022 | 2:25 PM

ಚಿತ್ರರಂಗದ ಅನೇಕರು ಬಂದು ಮೋಹನ್​ ಜುನೇಜ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಡಿಂಗ್ರಿ ನಾಗರಾಜ್​ ಮೆಲುಕು ಹಾಕಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಫೋಷಕ ಕಲಾವಿದನಾಗಿ, ಹಾಸ್ಯನಾಟನಾಗಿ ಮೋಹನ್​ ಜುನೇಜ (Mohan Juneja) ಅವರು ಖ್ಯಾತಿ ಪಡೆದುಕೊಂಡಿದ್ದರು. ಹಲವರ ಜೊತೆ ಅವರಿಗೆ ಸ್ನೇಹ ಇತ್ತು. ಮೇ 6ರ ರಾತ್ರಿ ನಿಧನರಾದ ಮೋಹನ್​ ಜುನೇಜ ಅವರ ಅಂತಿಮ ದರ್ಶನ ಪಡೆಯಲು ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಆಗಮಿಸಿದ್ದಾರೆ. ಹೊನ್ನಾವಳಿ ಕೃಷ್ಣ, ಡಿಂಗ್ರಿ ನಾಗರಾಜ್​, ಗಣೇಶ್​ ರಾವ್​ ಸೇರಿದಂತೆ ಹಲವರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಡಿಂಗ್ರಿ ನಾಗರಾಜ್​ (Dingri Nagaraj) ಮತ್ತು ಮೋಹನ್​ ಜುನೇಜ ಅವರದ್ದು ಹಲವು ವರ್ಷಗಳ ಸ್ನೇಹ. ರಂಗಭೂಮಿಯ ದಿನಗಳಿಂದಲೂ ಅವರು ಜೊತೆಯಲ್ಲೇ ಇದ್ದರು. ‘ನಾಟಕದಿಂದ ಚಿತ್ರರಂಗಕ್ಕೆ ಬಂದಮೇಲೆ ಅವನ ಪ್ರಸಿದ್ಧಿ ಹೆಚ್ಚಿತ್ತು. ಆಪರೇಷನ್​ ಆದ ಬಳಿಕ ಸ್ವಲ್ಪ ಡಿಪ್ರೆಷನ್​ಗೆ ಹೋಗಿದ್ದ. ನಿನ್ನ ರಾತ್ರಿ ಇದ್ದಕ್ಕಿದ್ದಂತೆ ಬ್ಲಡ್​ ವಾಮಿಟ್​ ಮಾಡಿಕೊಂಡನಂತೆ. ಅವನನ್ನು ಕಳೆದುಕೊಂಡ ಅವರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ಸಿಗಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ’ ಎಂದಿದ್ದಾರೆ ಡಿಂಗ್ರಿ ನಾಗರಾಜ್​. ಇಂದು (ಮೇ 7) ಮಧ್ಯಾಹ್ನ ತಮ್ಮೇನಹಳ್ಳಿ ಗ್ರಾಮದ ಸ್ಮಶಾನದಲ್ಲಿ ಮೋಹನ್​ ಜುನೇಜ ಅಂತ್ಯಕ್ರಿಯೆ (Mohan Juneja Funeral) ನಡೆಯಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

 

Published On - 2:25 pm, Sat, 7 May 22

Follow us on