MLA speaks after obtaining bail; ನಮ್ಮ ಮನೆಗಳಲ್ಲಿ ಸಿಕ್ಕಿದ್ದು ಅಕ್ರಮ ಹಣವಲ್ಲ, ನ್ಯಾಯಯುತವಾಗಿ ಸಂಪಾದಿಸಿದ್ದು: ಮಾಡಾಳ್ ವಿರೂಪಾಕ್ಷಪ್ಪ

TV9 Digital Desk

| Edited By: Arun Kumar Belly

Updated on:Mar 07, 2023 | 5:32 PM

ಅರೋಪ ಬಂದ ಕೂಡಲೇ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಕೆಎಸ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ, ನಮ್ಮ ಸರ್ಕಾರದಲ್ಲಿ ಎಲ್ಲವೂ ಪಾರದರ್ಶಕ ಎಂದು ಶಾಸಕರು ಹೇಳಿದರು.

ದಾವಣಗೆರೆ: ಲೋಕಾಯುಕ್ತ ದಾಳಿಯ ವೇಳೆ ಸಿಕ್ಕ ಹಣ ಅಕ್ರಮವಲ್ಲ, ತಾನೊಬ್ಬ ಅಡಕೆ ಬೆಳೆಗಾರ ಮತ್ತು ಉದ್ಯಮಿ; ಯಾವುದೇ ಅಡಕೆ ಬೆಳೆಗಾರನ (areca nut grower) ಮನೆಗೆ ಹೋದರೂ ಮನೆಯಲ್ಲಿ ಕನಿಷ್ಟವೆಂದರೂ 2-3 ಕೋಟಿ ರೂಪಾಯಿ ಸಿಗುತ್ತದೆ ಎಂದು ಜಾಮೀನು ಸಿಕ್ಕ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಹೇಳಿದರು. ಪತ್ರಕರ್ತರೊಂದಿಗೆ ದಾವಣಗೆರೆಯಲ್ಲಿ ಮಾತಾಡಿದ ಅವರು ತಾನು ಎಲ್ಲೂ ಹೋಗಿರಲಿಲ್ಲ, ಆರೋಪ ಮೈಮೇಲೆ ಬಂದಿದ್ದರಿಂದ ಜನರೆದುರು ಬರಲಿಲ್ಲ ಎಂದು ಅವರು ಹೇಳಿದರು. ರಾಜಕೀಯದಲ್ಲಿ ಪ್ರಾಯಶಃ ಮೊದಲಬಾರಿಗೆ ಆಡಳಿತ ಶಾಸಕನೊಬ್ಬನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ, ಅರೋಪ ಬಂದ ಕೂಡಲೇ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಕೆಎಸ್ ಡಿಎಲ್ (KSDL) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ, ನಮ್ಮ ಸರ್ಕಾರದಲ್ಲಿ ಎಲ್ಲವೂ ಪಾರದರ್ಶಕ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada