ಗೃಹಲಕ್ಷ್ಮೀ ಫಲಾನುಭವಿಗಳಿಗೆ ತಲುಪದ ಹಣ; ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?, ಇಲ್ಲಿದೆ ವಿಡಿಯೋ

ಗೃಹಲಕ್ಷ್ಮೀ ಫಲಾನುಭವಿಗಳಿಗೆ ತಲುಪದ ಹಣ; ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?, ಇಲ್ಲಿದೆ ವಿಡಿಯೋ

ಪ್ರಸನ್ನ ಗಾಂವ್ಕರ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 11, 2023 | 10:19 PM

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಬಹುಮತದೊಂದಿಗೆ ರಾಜ್ಯದ ಆಡಳಿತ ಚುಕ್ಕಾಣಿ ಕೂಡ ಹಿಡಿದಿತ್ತು. ಇನ್ನು ಮೊದಲೆ ಭರವಸೆ ಕೊಟ್ಟಿದ್ದಂತೆ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ. ಅದರಂತೆ ಗ್ಯಾರಂಟಿಗಳಲ್ಲೊಂದಾದ  ಗೃಹ ಲಕ್ಷ್ಮೀ ಯೋಜನೆ (Gruha Lakshmi Scheme) ಹಣ, ಇನ್ನು ಫಲಾನುಭವಿಗಳ ಅಕೌಂಟಿಗೆ ಜಮೆಯಾಗಿಲ್ಲ.

ಬೆಂಗಳೂರು, ಅ.11: ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಬಹುಮತದೊಂದಿಗೆ ರಾಜ್ಯದ ಆಡಳಿತ ಚುಕ್ಕಾಣಿ ಕೂಡ ಹಿಡಿದಿತ್ತು. ಇನ್ನು ಮೊದಲೆ ಭರವಸೆ ಕೊಟ್ಟಿದ್ದಂತೆ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ. ಅದರಂತೆ ಗ್ಯಾರಂಟಿಗಳಲ್ಲೊಂದಾದ  ಗೃಹ ಲಕ್ಷ್ಮೀ ಯೋಜನೆ (Gruha Lakshmi Scheme) ಹಣ, ಇನ್ನು ಫಲಾನುಭವಿಗಳ ಅಕೌಂಟಿಗೆ ಜಮೆಯಾಗಿಲ್ಲ. ಈ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar)​ ‘ ರಾಜ್ಯದಲ್ಲಿ ಈಗ 9.44 ಲಕ್ಷ ಜನರದ್ದು ಪೆಂಡಿಗ್ ಇದೆ. ನಾಳೆ(ಅ.12) ಈ ಕುರಿತು ಡಾಟಾ ತಗೆದುಕೊಳ್ಳುತ್ತೇನೆ. ಈಗಾಗಲೇ 1 ಕೋಟಿ ಜನರ ಕುಟುಂಬಕ್ಕೆ ಹೋಗಿದೆ. ನಮ್ಮ ಟಾರ್ಗೆಟ್ ಇರುವುದು 1 ಕೋಟಿ 15 ಲಕ್ಷ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ