ಸರ್ಕಾರದ ಜನಪರ ಯೋಜನೆಗಳಿಂದ ಉಳಿಯುವ ಹಣ ತರಕಾರಿಗಳ ಮೇಲೆ ಸುರಿಯಬೇಕಿದೆ ಎನ್ನುತ್ತಾರೆ ಬೆಂಗಳೂರು ನಿವಾಸಿಗಳು

|

Updated on: Aug 02, 2023 | 12:23 PM

ಟೊಮೆಟೊ ಬೆಲೆಯಿಂದಾಗಿ ತರಕಾರಿ ಬಜೆಟ್ ಸರಿದೂಗಿಸುವುದು ಕಷ್ಟವಾಗುತ್ತಿದೆ, ಬೇರೆ ಕಾಯಿಪಲ್ಲೆಗಳ ಬೆಲೆ ಕೂಡ ಹತ್ತಿಪ್ಪತ್ತು ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ನಿವಾಸಿಯೊಬ್ಬರು ಹೇಳುತ್ತಾರೆ.

ಬೆಂಗಳೂರು: ಟೊಮೆಟೊ ಮಾತ್ರವಲ್ಲ ಎಲ್ಲ ತರಕಾರಿಗಳ ಬೆಲೆ (vegetable price) ಹೆಚ್ಚಾಗಿದೆ, ಅಗತ್ಯ ಸರಕುಗಳ ಬೆಲೆಯಲ್ಲಿ ಹೆಚ್ಚಳದಿಂದ ತತ್ತರಿಸಿರುವ ಜನಸಾಮಾನ್ಯರು ಗಗನಕ್ಕೇರಿರುವ ತರಕಾರಿಗಳ ಬೆಲೆಯೊಂದಿಗೆ ಏಗಲು ಹೆಣಗುತ್ತಿದ್ದಾರೆ. ಕೆ ಆರ್ ಮಾರ್ಕೆಟ್ ನಲ್ಲಿ (KR Market) ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಗೃಹಿಣಿಯೊಬ್ಬರು ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದಾಗಿನಿಂದ ತರಕಾರಿ ಬೆಲೆಗಳು ಹೆಚ್ಚುತ್ತಲೇ ಇವೆ. ಸರ್ಕಾರದ ಯೋಜನೆಗಳಿಂದ ಒಂದು ರೀತಿಯಲ್ಲಿ ಪ್ರಯೋಜನವಾದರೂ ಅಲ್ಲಿ ಉಳಿಸುವ ಹಣವನ್ನು ತರಕಾರಿಗಳ ಮೇಲೆ ಖರ್ಚು ಮಾಡಬೇಕಿದೆ ಎಂದರು. ಮತ್ತೊಬ್ಬ ವ್ಯಕ್ತಿ, ಟೊಮೆಟೊ ಬೆಲೆಯಿಂದ ತರಕಾರಿ ಬಜೆಟ್ ಸರಿದೂಗಿಸುವುದು ಕಷ್ಟವಾಗುತ್ತಿದೆ. ಬೇರೆ ಕಾಯಿಪಲ್ಲೆಗಳ ಬೆಲೆ ಕೂಡ ಹತ್ತಿಪ್ಪತ್ತು ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ