ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ: ಗಂಡನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಮೋನಿಕಾ
ಪತಿ ಮಂಜುನಾಥ್‌ನಿಂದ ದೌರ್ಜನ್ಯ, ಕೊಲೆ ಬೆದರಿಕೆ ಹಾಗೂ ಆನ್‌ಲೈನ್ ಗ್ಯಾಂಬ್ಲಿಂಗ್ ಚಟದಿಂದ ತೊಂದರೆಗೊಳಗಾಗಿ, ಕಾನ್ಸ್ಟೆಬಲ್ ರಾಘವೇಂದ್ರ ನೆರವು ಪಡೆದಿರುವುದಾಗಿ ಮೋನಿಕಾ ಹೇಳಿದ್ದಾಳೆ. ಮಾಧ್ಯಮಗಳ ಮುಂದೆ ತನ್ನ ಕಷ್ಟಗಳನ್ನು ಹೇಳಿಕೊಂಡಿರುವ ಅವರು, ಪತಿಯು ತಂದೆ, ಅಣ್ಣನಿಗೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾಳೆ. ಇದೀಗ ಮಾಧ್ಯಮಗಳ ಮುಂದೆ ಬಂದು ಗಂಡ ವಿರುದ್ಧ ಹೇಳಿಕೆ ನೀಡಿದ್ದಾಳೆ.
ಬೆಂಗಳೂರು, ಡಿ.13: ಬೆಂಗಳೂರಿನಲ್ಲಿ ಕಾನ್ಸ್ಟೆಬಲ್ ಜತೆ ಪರಾರಿಯಾಗಿದ್ದ ಮೋನಿಕಾ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾಳೆ. ತಮ್ಮ ಪತಿ ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 13 ವರ್ಷಗಳ ಹಿಂದೆ ಮಂಜುನಾಥ್ ತನಗೆ ಕೊಲೆ ಬೆದರಿಕೆ ಹಾಕಿ, ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಮೋನಿಕಾ ಹೇಳಿದ್ದಾಳೆ. ಮದುವೆಯಾದಾಗಿನಿಂದಲೂ ದೌರ್ಜನ್ಯ ಎಸಗಿದ್ದಾನೆ ಹಾಗೂ ಆನ್‌ಲೈನ್ ಗ್ಯಾಂಬ್ಲಿಂಗ್‌ಗೆ ದಾಸನಾಗಿದ್ದಾನೆ ಎಂದು ಆರೋಪಿಸಿದ್ದಾಳೆ. ಮೋನಿಕಾ ಪ್ರಕಾರ, ಮಂಜುನಾಥ್ ತನಗೆ ಹಾಗೂ ಮಗುವಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಬಟ್ಟೆ, ಊಟಕ್ಕೂ ಸಹ ಅವರ ತಂದೆಯೇ ನೆರವು ನೀಡುತ್ತಿದ್ದರು. ತನ್ನ ಅಣ್ಣ ಸುನೀಲ್ ಕುಮಾರ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಎಲ್ಲ ಕಷ್ಟಗಳ ನಡುವೆ ಕಾನ್ಸ್ಟೆಬಲ್ ರಾಘವೇಂದ್ರ ತಮಗೆ ಮಾನಸಿಕ ಮತ್ತು ಆರ್ಥಿಕವಾಗಿ ಬೆಂಬಲ ನೀಡಿದ್ದಾರೆ, ಬಾಡಿಗೆ ಕಟ್ಟಿದ್ದಾರೆ ಎಂದು ಮೋನಿಕಾ ತಿಳಿಸಿದ್ದಾಳೆ. ಈ ಘಟನೆಯಲ್ಲಿ ರಾಘವೇಂದ್ರ ಅವರ ತಪ್ಪಿಲ್ಲ ಎಂದು ಮೋನಿಕಾ ಸಮರ್ಥಿಸಿಕೊಂಡಿದ್ದಾಳೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
