ಹಾಸನ: ಮದುವೆಗೆ ಬಂದವರಿಗೆ ಕಚ್ಚಿದ ಕೋತಿ, ಕಲ್ಯಾಣ ಮಂಟಪದಲ್ಲಿ ಮಂಗನಾಟಕ್ಕೆ ಹೈರಾಣಾದ ಜನ
ಕೋತಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಮದುವೆಗೆ ಬಂದಿದ್ದ 8 ಜನರಿಗೆ ಕೋತಿ ಕಚ್ಚಿದೆ. ಗಾಯಾಳುಗಳಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಹಾಸನ, ಜುಲೈ 02: ಮದುವೆಗೆ ಬಂದಿದ್ದ ಎಂಟು ಜನರ ಮೇಲೆ ಕೋತಿ ದಾಳಿ ಮಾಡಿರುವ ಘಟನೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಸೋಮವಾರ ಮದುವೆ (Marriage) ಸಮಾರಂಭ ನಡೆಯಿತು. ಮದುವೆ ಮನೆಗೆ ಕೋತಿಯೊಂದು ನುಗ್ಗಿ ರಂಪಾಟ ಮಾಡಿದೆ. ಕೋತಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದೆ. ಅಲ್ಲದೆ, ಊಟದ ಹಾಲ್ಗೆ ತೆರಳಿ ಊಟ ಮಾಡುತ್ತಿದ್ದವರಿಗೆ ತೊಂದರೆ ಕೊಟ್ಟಿದೆ. ಮದುವೆಗೆ ಬಂದಿದ್ದ ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ, ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದೆ. ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಮದುವೆ ಮನೆಯಲ್ಲಿ ಮಂಗನಾಟಕ್ಕೆ ಜನರು ಹೈರಾಣಾಗಿದ್ದಾರೆ. ಈ ಕೋತಿ ಹಳ್ಳಿಯ ಜನಕ್ಕೆ ಆಗಾಗ್ಗೆ ಕಾಟ ಕೊಡುತ್ತಿದ್ದು, ಇದೀಗ ಮದುವೆ ಮನೆಗೆ ಬಂದವರಿಗೂ ಕಾಟ ಕೊಟ್ಟಿದೆ. ಹೀಗಾಗಿ ಕೋತಿಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಚಿಕಿತ್ಸೆಗೆ ಬಂದ ವೃದ್ಧಗೆ ಮೆಹಂದಿ ಕೋನ್ ʼಔಷಧಿʼ: ಸ್ಪಷ್ಟನೆ ನೀಡಿದ ಹಾಸನ ವೈದ್ಯಾಧಿಕಾರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ