ತುಮಕೂರು: ಗೃಹ ಸಚಿವರ ಮನೆಯೊಳಗೆ ನುಗ್ಗಿ ಕದ್ದು ಹಾಲು ಕುಡಿದ ಕೋತಿ

| Updated By: ವಿವೇಕ ಬಿರಾದಾರ

Updated on: Feb 26, 2024 | 10:46 AM

ಬೆಕ್ಕು ಕದ್ದು ಹಾಲು ಕುಡಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕೋತಿ ಗೃಹ ಸಚಿವರ ಮನೆಯಲ್ಲಿ ಕದ್ದು ಹಾಲು ಕುಡಿದಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್​ ಅವರ ತುಮಕೂರಿನ ಸಿದ್ದಾರ್ಥ ನಗರದಲ್ಲಿರುವ ಮನೆಯೊಳಗೆ ನುಗ್ಗಿದ ಕೋತಿ ಫ್ರೀಡ್ಜ್ ಬಾಗಿಲು ತೆಗೆದು ಹಾಲಿ ಪಾಕೇಟ್ ತೆಗೆದುಕೊಂಡು, ಮೆಟ್ಟಿಲಿನ ಮೇಲೆ ಕುಳಿತು ಹಾಲು ಕುಡಿದಿದೆ.

ತುಮಕೂರು, ಫೆಬ್ರವರಿ 26: ಬೆಕ್ಕು ಕದ್ದು ಹಾಲು ಕುಡಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕೋತಿ ಗೃಹ ಸಚಿವರ ಮನೆಯಲ್ಲಿ ಕದ್ದು ಹಾಲು ಕುಡಿದಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ (G Parmeshwar)​ ಅವರು ಇಂದು (ಫೆ.26) ತುಮಕೂರಿನ (Tumakur) ಸಿದ್ದಾರ್ಥ ನಗರದಲ್ಲಿರುವ ಮನೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಮನಗೆ ಬಂದ ಕೋತಿ, ನೆರವಾಗಿ ಒಳಗೆ ನುಗ್ಗಿದೆ. ಬಳಿಕ ಫ್ರೀಡ್ಜ್ ಬಾಗಿಲು ತೆಗೆದು ಹಾಲಿ ಪಾಕೇಟ್ ತೆಗೆದುಕೊಂಡು, ಮೆಟ್ಟಿಲಿನ ಮೇಲೆ ಕುಳಿತು ಹಾಲು ಕುಡಿದಿದೆ. ಭದ್ರತಾ ಸಿಬ್ಬಂದಿ ಕೋತಿ ಓಡಿಸಲು ಮುಂದಾದಾಗ, ಗೃಹ ಸಚಿವರು ಓಡಿಸಬೇಡಿ ಎಂದು ತಡೆದರು. ಬಳಿಕ ಕೋತಿ ಹಾಲು ಕುಡಿದು ಹೊರ ನಡೆದಿದೆ. ಗೃಹ ಸಚಿವರ ಮನೆಯಲ್ಲೇ ಕೋತಿ ಹಾಲು ಕಳ್ಳತನ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಹಲವು ರೀತಿ ಕಾಮೆಂಟ್​ ಮಾಡಿದ್ದಾರೆ.