ಮಾನವೀಯತೆ ಮರೆತು ಬಿಟ್ರಾ ನಮ್ಮ‌ ಮೆಟ್ರೋ ಸಿಬ್ಬಂದಿ? ಬಟ್ಟೆ ಕೊಳೆಯಿದೆ ಎಂದು ಒಳಗೆ ಬಿಡದೆ ರೈತನಿಗೆ ಅವಮಾನ

ಬಟ್ಟೆ ಕೊಳೆಯಾಗಿದೆ ಎಂಬ ಕಾರಣಕ್ಕೆ ರಾಜಾಜಿನಗರ ಮೆಟ್ರೋ ಸಿಬ್ಬಂದಿ ರೈತನನ್ನು ಒಳಗೆ ಬಿಡದೆ ದರ್ಪ ಮೆರೆದಿದ್ದಾರೆ. ಸದ್ಯ ರೈತನ ಪರ ವಾದಿ ಮಾಡಿ ಸಹ ಪ್ರಯಾಣಿಕರು ರೈತನನ್ನು ಮೆಟ್ರೋ ನಿಲ್ದಾಣ ಒಳಗೆ ಕರೆದುಕೊಂಡು ಹೋಗಿದ್ದಾರೆ. ಮೆಟ್ರೋ ಸಿಬ್ಬಂದಿಯ ಈ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರೈತನನ್ನು ಅವಮಾನಿಸಿದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಮಾನವೀಯತೆ ಮರೆತು ಬಿಟ್ರಾ ನಮ್ಮ‌ ಮೆಟ್ರೋ ಸಿಬ್ಬಂದಿ? ಬಟ್ಟೆ ಕೊಳೆಯಿದೆ ಎಂದು ಒಳಗೆ ಬಿಡದೆ ರೈತನಿಗೆ ಅವಮಾನ
| Updated By: ಆಯೇಷಾ ಬಾನು

Updated on:Feb 26, 2024 | 11:40 AM

ಬೆಂಗಳೂರು, ಫೆ.26: ಮಾನವೀಯತೆ ಮರೆತು ಬಿಟ್ರಾ ನಮ್ಮ‌ ಮೆಟ್ರೋ (Namma Metro) ಸಿಬ್ಬಂದಿ? ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ (Rajajinagar Metro Station) ಮೆಟ್ರೋ ಸಿಬ್ಬಂದಿ ರೈತನನ್ನ ಅವಮಾನಿಸಿದ್ದಾರೆ. ಅತಿರೇಕದ ವರ್ತನೆ ತೋರಿದ್ದಾರೆ. ದೇಶದ ಬೆನ್ನೆಲುಬು ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಅವಮಾನ ಆಗಿದೆ. ಬಟ್ಟೆ ಕ್ಲೀನ್ ಇಲ್ಲ ಎಂಬ ಕಾರಣಕ್ಕೆ ರೈತನನ್ನ ಮೆಟ್ರೋ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದಾರೆ. ಮೆಟ್ರೋ ನಿಲ್ದಾಣದ ಒಳಗೆ ಬಿಟ್ಟುಕೊಳ್ಳದೇ ದುರಹಂಕಾರ ಮೆರೆದಿದ್ದಾರೆ. ಸದ್ಯ ಈ ಘಟನೆ ಟಿವಿ9ನಲ್ಲಿ ಪ್ರಸಾರವಾಗುತ್ತಿದ್ದಂತೆ ಅವಮಾನ ಮಾಡಿದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಬಟ್ಟೆ ಕೊಳೆಯಿದೆ ಎಂದು ಬಡ ರೈತನ ಮೇಲೆ‌ ಸಿಬ್ಬಂದಿಯ ದುರಹಂಕಾರದ‌ ವರ್ತನೆ ಮೆರೆದಿದ್ದರು. ಇದು ಸಹ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿದೆ. ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗುತ್ತೆ ಅಂತ ಒಳಗೆ ಬಿಡ್ತಿಲ್ಲ ಅಂತ ಪ್ರಯಾಣಿಕರಿಗೆ ಆಕ್ರೋಶ ಹೊರ ಹಾಕಿದ್ದಾರೆ. ಕೊನೆಗೆ ಸಿಬ್ಬಂದಿಗೆ ಕ್ಯಾರೇ ಮಾಡದೇ ಸಹ ಪ್ರಯಾಣಿಕರೇ ರೈತರನ್ನು ಕರೆದುಕೊಂಡು ಹೋಗಿದ್ದಾರೆ. ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಲಾಗಿದೆ. ಬಿಎಂಆರ್​ಸಿಎಲ್​ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರನಾ ಮೆಟ್ರೋ ಅಂತ ಕಿಡಿಕಾರಿದ್ದಾರೆ. ರೈತ ಬೆಳೆ ಬೆಳೆದಿಲ್ಲ ಅಂದ್ರೆ ನೀವು ಏನು ತಿಂತೀರಾ ಅಂತ ಜನರು ಪ್ರಶ್ನೆ ಮಾಡಿದ್ದಾರೆ. ಮೆಟ್ರೋ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಟ್ವಿಟರ್ ಬಳಕೆದಾರರು ಆಗ್ರಹಿಸಿದ್ದಾರೆ. ಸಿಬ್ಬಂದಿಯ ಈ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ರೈತನನ್ನ ಅಪಮಾನ ಮಾಡಿದ್ದ ಮೆಟ್ರೋ ಸಿಬ್ಬಂದಿ ಸಸ್ಪೆಂಡ್

ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಈ ಮೂಲಕ ರೈತನನ್ನ ಅಪಮಾನ ಮಾಡಿದ್ದ ಮೆಟ್ರೋ ಸಿಬ್ಬಂದಿ ಸಸ್ಪೆಂಡ್ ಮಾಡಲಾಗಿದೆ.

ಇನ್ನು ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಅಕ್ಷಮ್ಯ ಅಪರಾಧ. ಮೈಮೇಲೆ ಬಟ್ಟೆ ಇಲ್ಲ ಅಂದರೆ ಸಿಬ್ಬಂದಿ ತಡೆಯಬೇಕು. ಬಟ್ಟೆ ಕೊಳೆ ಆಗಿದೆ, ಹರಿದಿದೆ ಅಂತ ಹೀಗೆ ಮಾಡ್ಬಾರದು. ಈ ಪ್ರಮಾದ ಮಾಡಿರುವರಿಗೆ ತಕ್ಕ ಶಿಕ್ಷೆಯಾಗಬೇಕು. ಇದನ್ನ ನಾನು ಸಂಬಂಧಪಟ್ಟವರ ಗಮನಕ್ಕೆ ತರ್ತೇನೆ ಎಂದರು.

ಇದು ಯಾವುದೇ ಕಾರಣಕ್ಕೂ ಕ್ಷಮಿಸುವಂತದ್ದಲ್ಲ. ಗಮನಕ್ಕೆ ಬಂದ ಕೂಡಲೇ ಸೆಕ್ಯೂರಿಟಿ ಸೂಪರವೈಸರನ್ನ ವಜಾ ಮಾಡಲಾಗಿದೆ ಎಂದು ಟಿವಿ9ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಯಶವಂತ್ ಚೌಹಣ್ ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:29 am, Mon, 26 February 24

Follow us