WITT TV9 Global Summit 2024: ಎಲ್ಲರನ್ನೂ ಒಗ್ಗೂಡಿಸಿಕೊಂಡು ಭಾರತ ವಿಶ್ವದ ಮೂರನೇ ಅತಿದೊಡ್ಡ ಎಕಾನಮಿಯಾಗುವೆಡೆ ದಾಪುಗಾಲಿಟ್ಟಿದೆ: ಬರುಣ್ ದಾಸ್, ಟಿವಿ9 ನೆಟ್ವರ್ಕ್ ಸಿಈಓ

WITT TV9 Global Summit 2024: ಎಲ್ಲರನ್ನೂ ಒಗ್ಗೂಡಿಸಿಕೊಂಡು ಭಾರತ ವಿಶ್ವದ ಮೂರನೇ ಅತಿದೊಡ್ಡ ಎಕಾನಮಿಯಾಗುವೆಡೆ ದಾಪುಗಾಲಿಟ್ಟಿದೆ: ಬರುಣ್ ದಾಸ್, ಟಿವಿ9 ನೆಟ್ವರ್ಕ್ ಸಿಈಓ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 26, 2024 | 1:57 PM

WITT TV9 Global Summit 2024: ಮುಂದುವರಿದು ಮಾತಾಡಿದ ಬರುಣ್ ದಾಸ್, ವಿಶ್ವಶಾಂತಿಯ ಪ್ರತಿಪಾದಕನಾಗಿರುವ ಭಾರತವು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯೇ ಹೇಳಿರುವ ಹಾಗೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಉಜ್ವಲ ಸ್ಥಾನದಲ್ಲಿದೆ ಎಂದರು. ಚೀನಾ ಸೇರಿದಂತೆ ವಿಶ್ವದ ಹಲವಾರು ಬಲಿಷ್ಠ ಆರ್ಥಿಕ ರಾಷ್ಟ್ರಗಳು ತಮ್ಮವೇ ಆದ ಸಮಸ್ಯೆಗಳಲ್ಲಿ ಸಿಲುಕಿರುವಾಗ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವೆನಿಸಿಕೊಳ್ಳುವತ್ತ ಶರವೇಗದಿಂದ ಸಾಗುತ್ತಿದೆ ಎಂದು ಅವರು ಹೇಳಿದರು.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಟಿವಿ9 ನೆಟ್ವರ್ಕ್ ಆಯೋಜಿಸಿರುವ 3-ದಿನಗಳ ವ್ಹಾಟ್ ಇಂಡಿಯ ಥಿಂಕ್ಸ್ ಟುಡೇ (What India Thinks Today) ಜಾಗತಿಕ ಶೃಂಗಸಭೆಯ ಎರಡನೇ ದಿನವಾದ ಇಂದು ಕಾರ್ಯಕ್ರಮಕ್ಕೆ ಆಗಮಿಸಿರುವ ದೇಶ ವಿದೇಶಗಳ ಗಣ್ಯರನ್ನು ಸ್ವಾಗತಿಸಿ ಮಾತಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬರುಣ್ ದಾಸ್ (Barun Das), ಶೃಂಗಸಭೆ ಅಯೋಜನೆಯ ಉದ್ದೇಶವನ್ನು ವಿವರಿಸುತ್ತಾ, ಭಾರತವು ವಿಶ್ವ ಆರ್ಥಿಕ ವ್ಯವಸ್ಥೆಯಲ್ಲಿ (global economy) ಒಂದು ನಿರ್ಣಾಯಕ ಪಾತ್ರ ನಿರ್ವಹಿಸುವೆಡೆ ದಾಪುಗಾಲಿಟ್ಟಿದೆ ಎಂದರು. ಈ ನಿಟ್ಟನಲ್ಲಿ ತಮ್ಮ ದೃಷ್ಟಿಕೋನ, ಅಭಿಪ್ರಾಯ ತಿಳಿಸಲು ಮತ್ತು ಸಲಹೆ ಸೂಚನೆಗಳನ್ನು ಹಂಚಿಕೊಳ್ಳಲು ಸುಮಾರು 120 ದೇಶಗಳ ರಾಜಕೀಯ ನಾಯಕರು, ಆರ್ಥಿಕ ತಜ್ಞರು ಮತ್ತು ಮೇಧಾವಿಗಳನ್ನು ಆಹ್ವಾನಿಸಿದ್ದು ಆಮಂತ್ರಣ ಸ್ವೀಕರಿಸಿ ಶೃಂಗಸಭೆಗಾಗಿ ತಮ್ಮ ಸಮಯ ಹಾಗೂ ಶಕ್ತಿಯನ್ನು ವ್ಯಯಿಸುತ್ತಿರುವ ಅವರೆಲ್ಲರಿಗೆ ಟವಿ9 ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಬರುಣ್ ದಾಸ್, ವಿಶ್ವಶಾಂತಿಯ ಪ್ರತಿಪಾದಕನಾಗಿರುವ ಭಾರತವು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯೇ ಹೇಳಿರುವ ಹಾಗೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಉಜ್ವಲ ಸ್ಥಾನದಲ್ಲಿದೆ ಎಂದರು.

ಚೀನಾ ಸೇರಿದಂತೆ ವಿಶ್ವದ ಹಲವಾರು ಬಲಿಷ್ಠ ಆರ್ಥಿಕ ರಾಷ್ಟ್ರಗಳು ತಮ್ಮವೇ ಆದ ಸಮಸ್ಯೆಗಳಲ್ಲಿ ಸಿಲುಕಿರುವಾಗ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವೆನಿಸಿಕೊಳ್ಳುವತ್ತ ಶರವೇಗದಿಂದ ಸಾಗುತ್ತಿದೆ ಎಂದ ಅವರು, ಶೃಂಗ ಸಭೆಯ ಇವತ್ತಿನ ಕಲಾಪಗಳಲ್ಲಿ ಜಾಗತಿಕ ಸಿಈಒಗಳು ಮತ್ತು ಭಾರತ ಸರ್ಕಾರದ ಸಚಿವರು ಪ್ರಮುಖ ವಿಷಯಗಳ ಬಗ್ಗೆ ಮಾತಾಡಲಿದ್ದಾರೆ ಮತ್ತು ಸಾಯಂಕಾಲದ ಸಮಯದಲ್ಲಿ ವಿಕ್ಸಿತ್ ಭಾರತ್ ನ ಹರಿಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ನವ್ಯ ಭಾರತದ ವಿಹಂಗಮ ದೃಷ್ಟಿಕೋನವನ್ನು ನಮಗೆ ನೀಡಲಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 26, 2024 12:10 PM