Karnataka Budget Session: ರಾಜಾ ವೆಂಕಟಪ್ಪ ನಾಯಕ್ ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು: ಸಿದ್ದರಾಮಯ್ಯ, ಸಿಎಂ
Karnataka Budget Session: ನಾಯಕ್ ಅವರ ದೇಹಸ್ಥಿತಿ ತ್ವರಿತವಾಗಿ ಕ್ಷೀಣಿಸತೊಡಗಿತ್ತು ಅದರೆ ಇಷ್ಟು ಬೇಗ ವಿಧಿ ಅವರ ಬಲಿ ತೆಗೆದುಕೊಳ್ಳುತ್ತದೆ ಅಂದುಕೊಂಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ತಳಮಟ್ಟದ ರಾಜಕಾರಣದಿಂದ ವಿಧಾನ ಸಭೆಯವರೆಗೆ ಬಂದ ವೆಂಕಟಪ್ಪ ನಾಯಕ್ ಜನಪ್ರಿಯ ಮತ್ತು ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.
ಬೆಂಗಳೂರು: ವಿಧಾನಮಂಡಲದ ವಿಸ್ತೃತ ಬಜೆಟ್ ಅಧಿವೇಶನದದಲ್ಲಿ ಇಂದು ಸಭಾಧ್ಯಕ್ಷ ಯುಟಿ ಖಾದರ್ (Speaker UT Khader) ಅವರು ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak) ಅವರು ನಿಧನದ ಹಿನ್ನೆಲೆಯಲ್ಲಿ ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾವುಕರಾದರು. ನಾಲ್ಕುಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದ ವೆಂಕಟಪ್ಪ ನಾಯಕ್ ವಯಸ್ಸಿನಲ್ಲಿ ತಮಗಿಂತ ಬಹಳ ಕಿರಿಯರಾಗಿದ್ದರು ಮತ್ತು ತಮಗೆ ಅತ್ಯಂತ ಆಪ್ತರಾಗಿದ್ದರು ಎಂದು ಹೇಳಿದರು. ಮೊನ್ನೆಯಷ್ಟೇ ಅವರನ್ನು ದಾಖಲಿಸಲಾಗಿದ್ದ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದರೂ ಅವರೊಂದಿಗೆ ಮಾತಾಡಲಾಗಿರಲಿಲ್ಲ. ಅದರ ಹಿಂದಿನ ದಿನ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಹೋಗಿದ್ದರು. ಅವರ ದೇಹಸ್ಥಿತಿ ತ್ವರಿತವಾಗಿ ಕ್ಷೀಣಿಸತೊಡಗಿತ್ತು ಅದರೆ ಇಷ್ಟು ಬೇಗ ವಿಧಿ ಅವರ ಬಲಿ ತೆಗೆದುಕೊಳ್ಳುತ್ತದೆ ಅಂದುಕೊಂಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ತಳಮಟ್ಟದ ರಾಜಕಾರಣದಿಂದ ವಿಧಾನ ಸಭೆಯವರೆಗೆ ಬಂದ ವೆಂಕಟಪ್ಪ ನಾಯಕ್ ಜನಪ್ರಿಯ ಮತ್ತು ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ