ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ

Updated on: Oct 08, 2024 | 8:53 PM

ಸುಪ್ರೀಂ ಕೋರ್ಟ್​ ವಕೀಲರೊಬ್ಬರು ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಕೋತಿಯೊಂದು ಸುಪ್ರೀಂ ಕೋರ್ಟ್ ಕಾರಿಡಾರ್​​ಗೆ ಹಾರಿ, ಬ್ಯಾಗ್, ಊಟದ ಬಾಕ್ಸ್​ಗಳನ್ನು ತೆಗೆದುಕೊಂಡು ಪರಾರಿಯಾಗಿದೆ. ಇದನ್ನು ಸುತ್ತಲೂ ನಿಂತಿದ್ದ ಜನರು ನೋಡುತ್ತಾ ನಗುತ್ತಿದ್ದಾರೆ.

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ತಮಾಷೆಯ ಘಟನೆಯೊಂದರಲ್ಲಿ, ಎರಡು ಕೋತಿಗಳು ಕೋರ್ಟ್ ಆವರಣಕ್ಕೆ ನುಗ್ಗಿ ವಕೀಲರ ಬ್ಯಾಗ್ ಅನ್ನು ಕದ್ದಿವೆ. ಈ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋತಿಯು ಬ್ಯಾಗ್ ಎತ್ತಿಕೊಂಡು ಹೋಗಿದೆ. ಬಳಿಕ ಊಟದ ಡಬ್ಬಿಯನ್ನೂ ಎತ್ತಿಕೊಂಡು ಹೋಗಿದೆ. ನಂತರ ಆ ಬಾಕ್ಸ್ ಓಪನ್ ಮಾಡಲು ಪರದಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More