New Year Liquor Sales: ಕಡಿವಾಣಗಳ ನಡುವೆಯೂ ಅಬಕಾರಿ ಇಲಾಖೆಗೆ ಈ ವರ್ಷ ಕೋಟಿ ಕೋಟಿ ಆದಾಯ
ಈ ಬಾರಿಯ ಹೊಸ ವರ್ಷ ಅಬಕಾರಿ ಇಲಾಖೆಗೆ ದೊಡ್ಡ ದುಡ್ಡಿನ ಗಂಟೇ ತಂದುಕೊಟ್ಟಿದೆ. ನೈಟ್ಕರ್ಫ್ಯೂ, 50:50 ರೂಲ್ಸ್ ನಡುವೆ ಆದಾಯ ನಿರೀಕ್ಷೆ ಮಾಡದ ಇಲಾಖೆಗೆ, ಭರ್ಜರಿ ಲಾಟರಿ ಹೊಡೆದಿದೆ. ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ಗಳ ಪಾರ್ಟಿಗಳಲ್ಲಿ ಮದ್ಯದ ಹೊಳೆಯೇ ಹರಿದಿದ್ದು, ಹಿಂದಿನ ವರ್ಷಕ್ಕಿಂತ ಆದಾಯ ಶೇ.23ರಷ್ಟು ಹೆಚ್ಚಾಗಿದೆ.
ಬೆಂಗಳೂರು: ಹೊಸ ‘ಹರ್ಷ’ಕ್ಕೆ ರೂಲ್ಸ್ ಬೇಲಿ.. ಮದ್ಯಪ್ರಿಯರಿಗೆ ಬೇಸರದ ಸಂಭ್ರಮ.. ಲಿಮಿಟೆಡ್ ಟೈಮ್ ಜೊತೆ ಬಾರ್, ರೆಸ್ಟೋರೆಂಟ್ಗಳಲ್ಲಿ ಫುಲ್ಟೈಮ್ ‘ಕಿಕ್’ಗೆ ಕಡಿವಾಣ.. ಪಬ್ ಮಾಲೀಕರಿಗೆ ವ್ಯಾಪಾರದ ಟೆನ್ಷನ್ ಅದ್ರೆ, ಅಬಕಾರಿ ಇಲಾಖೆಗೆ ಆದಾಯದ ಚಿಂತೆ.. ಕಠಿಣ ನಿಯಮಗಳಿಂದ ಮದ್ಯ ಖರೀದಿಗೆ ಎಲ್ಲಿ ಹೊಡೆತ ಬೀಳುತ್ತೆ ಅನ್ನೋ ಯೋಚನೆ ಅಬಕಾರಿ ಇಲಾಖೆಗೆ ಕಾಡ್ತಿತ್ತು. ಆದ್ರೆ ಈ ಲಿಮಿಟೆಡ್ ಟೈಮ್ನಲ್ಲೂ ಹೊಸ ವರ್ಷ, ಅಬಕಾರಿ ಇಲಾಖೆಗೆ ಆದಾಯದ ಹರ್ಷ ತಂದು ಕೊಟ್ಟಿದೆ.
ಕಡಿವಾಣಗಳ ‘ಮದ್ಯ’ ಇಲಾಖೆಗೆ ಕೋಟಿ ಕೋಟಿ ಆದಾಯ
ಈ ಬಾರಿಯ ಹೊಸ ವರ್ಷ ಅಬಕಾರಿ ಇಲಾಖೆಗೆ ದೊಡ್ಡ ದುಡ್ಡಿನ ಗಂಟೇ ತಂದುಕೊಟ್ಟಿದೆ. ನೈಟ್ಕರ್ಫ್ಯೂ, 50:50 ರೂಲ್ಸ್ ನಡುವೆ ಆದಾಯ ನಿರೀಕ್ಷೆ ಮಾಡದ ಇಲಾಖೆಗೆ, ಭರ್ಜರಿ ಲಾಟರಿ ಹೊಡೆದಿದೆ. ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ಗಳ ಪಾರ್ಟಿಗಳಲ್ಲಿ ಮದ್ಯದ ಹೊಳೆಯೇ ಹರಿದಿದ್ದು, ಹಿಂದಿನ ವರ್ಷಕ್ಕಿಂತ ಆದಾಯ ಶೇ.23ರಷ್ಟು ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ ಅಂತ ಅಬಕಾರಿ ಇಲಾಖೆ ದಾಖಲೆ ಹೇಳ್ತಿದೆ. 6 ವರ್ಷಗಳಲೇ ಈ ಬಾರಿ ಹೆಚ್ಚು ಆದಾಯ ಹರಿದು ಬಂದಿದೆ.
ಅಬಕಾರಿಗೆ ‘ಆದಾಯ’ದ ಗಂಟು
ಮುಖ್ಯವಾಗಿ 2017 ರ ವರ್ಷದ ಅಂತ್ಯದ 8 ದಿನಗಳಲ್ಲಿ 306 ಕೋಟಿ ಮದ್ಯದ ವಹಿವಾಟು ನಡೆದಿತ್ತು. 2018ರಲ್ಲಿ ಮದ್ಯ ಮಾರಾಟದಿಂದ 365 ಕೋಟಿ ಆದಾಯ ಬಂದಿದ್ರೆ, 2019ರಲ್ಲಿ 500 ಕೋಟಿ 2020 ರಲ್ಲಿ 519 ಕೋಟಿ ಆದಾಯ ದಕ್ಕಿತ್ತು. ಆದ್ರೆ ಈ ಬಾರಿ ಡಿಸೆಂಬರ್ 24 ರಿಂದ ಡಿಸೆಂಬರ್ 31 ವರೆಗೆ 639 ಕೋಟಿ ಆದಾಯ ಬಂದಿದೆ. ಡಿಸೆಂಬರ್ 31 ರಂದು ರಾಜ್ಯದಲ್ಲಿ 2.25 ಲಕ್ಷ IML ಬಾಕ್ಸ್ ಮಾರಾಟವಾಗಿದ್ರೆ, ಮೊನ್ನೆ ಒಂದೇ ದಿನ 1.59 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿದೆ. ಹಾಗೇ ಕಳೆದ 8 ದಿನಗಳಲ್ಲಿ ಒಟ್ಟು 10.13 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿದೆ, ಅಂತ ಅಬಕಾರಿ ಇಲಾಖೆ ಅಪರ ಆಯುಕ್ತ ರಾಜೇಂದ್ರ ಪ್ರಸಾದ್ ಹೇಳ್ತಿದ್ದಾರೆ.