‘ಕಪಾಳಕ್ಕೆ ಹೊಡೆಯೋದ್ರಲ್ಲಿ ಪುಟ್ಟಣ್ಣ ಕಣಗಾಲ್ ನಂ.1’; ನಟ ರಾಜೇಶ್ ಹೇಳಿದ ಅಚ್ಚರಿಯ ಸಂಗತಿ
Puttanna Kanagal: ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟ ರಾಜೇಶ್ ಅವರು ನೆನಪಿನ ಪುಟ ತೆರೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಕುರಿತು ಒಂದಷ್ಟು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ (Kannada Film Industry) ಕಂಡ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಚಂದನವನಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅನೇಕ ಕಲಾವಿದರಿಗೆ ಸ್ಟಾರ್ ಪಟ್ಟ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜತೆ ಕೆಲಸ ಮಾಡಲು ಎಲ್ಲ ನಟ-ನಟಿಯರು ಇಷ್ಟಪಡುತ್ತಿದ್ದರು. ಗುಣಮಟ್ಟದ ವಿಚಾರದಲ್ಲಿ ಪುಟ್ಟಣ್ಣ (Puttanna Kanagal) ಸಖತ್ ಕಟ್ಟುನಿಟ್ಟು. ಅವರಿಂದ ಕಪಾಳಕ್ಕೆ ಹೊಡೆತ ತಿಂದ ಅನೇಕ ಕಲಾವಿದರು ಇದ್ದಾರೆ ಎಂಬುದನ್ನು ಹಿರಿಯ ನಟ ರಾಜೇಶ್ (Senior Actor Rajesh) ನೆನಪಿಸಿಕೊಂಡಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ರಾಜೇಶ್ ಮಾತನಾಡಿದ್ದಾರೆ. ‘ಪುಟ್ಟಣ್ಣನವರ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಎಲ್ಲರೂ ಆಸೆಪಡುತ್ತಿದ್ದರು. ಆದರೆ ಅವರು ತುಂಬ ಕಟ್ಟುನಿಟ್ಟು. ಕಪಾಳಕ್ಕೆ ಹೊಡೆಯೋದ್ರಲ್ಲಿ ಪುಟ್ಟಣ್ಣ ನಂ.1 ಆಗಿದ್ದರು. ಸರಿಯಾಗಿ ಪಾತ್ರ ಮಾಡದಿದ್ದರೆ, ಸರಿಯಾಗಿ ಡೈಲಾಗ್ ಹೇಳದೇ ಇದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದರು. ಹೊಡೆತ ತಿಂದ ಕಲಾವಿದರು ತುಂಬ ಜನ ಇದ್ದಾರೆ. ಆದರೆ ನಾನೀಗ ಹೆಸರು ಹೇಳಲ್ಲ’ ಎಂದಿದ್ದಾರೆ ರಾಜೇಶ್.
ಇದನ್ನೂ ಓದಿ:
‘ಕಲ್ಪನಾ ಮತ್ತು ಮಂಜುಳಾಗೆ ಇಂಥ ಸಾವು ಬೇಕಿತ್ತಾ?’; ಮಿಂಚಿ ಮರೆಯಾದ ನಟಿಯರ ಬಗ್ಗೆ ರಾಜೇಶ್ ವಿಷಾದದ ಮಾತು
ಮಂಜುಳಾ ಮದುವೆ ಹಿಂದಿದೆ ದುರಂತ ಕಥೆ; ಸಾವಿನ ಕಾರಣ ವಿವರಿಸಿದ ಹಿರಿಯ ನಟ ರಾಜೇಶ್